ಲಾಯರ್ ಅಲ್ಲಾ ಬಕಾಷ್ ರಿಂದ ದಿನಸಿ ಕಿಟ್ಟ್ ವಿತರಣೆ

128

ಚಿಕ್ಕಬಳ್ಳಾಪುರ/ ಬಾಗೇಪಲ್ಲಿ :ಬಾಗೇಪಲ್ಲಿಯ ಖ್ಯಾತ ಲಾಯರ್ ಅಲ್ಲಾ ಬಕಾಶ್ ಅವರು ಇಂದು ಇನ್ನೂರೈವತ್ತು ಜನಕ್ಕೆ ಅಕ್ಕಿ ತರಕಾರಿ ಮತ್ತು ದಿನಸಿ ಪದಾರ್ಥ ಗಳನ್ನು ಕಿಟ್ಟನ್ನು ವಿತರಿಸಿ ಮಾತನಾಡಿದರು .

ನಾನು ನನ್ನ ಸಂಪಾದನೆಯ ಸ್ವಲ್ಪ ಹಣವನ್ನು ಸಿಎಂ ಫಂಡ್ಗೆ ಕೊಡಬೇಕು ಎನ್ನುವ ನನ್ನ ಅಭಿಪ್ರಾಯವಾಗಿತ್ತು ಆಗ ನಾನು ನಮ್ಮ ಶಾಸಕರು ಎನ್ ಸುಬ್ಬಾರೆಡ್ಡಿ ಅವರ ಜೊತೆ ಇದರ ಬಗ್ಗೆ ಚರ್ಚಿಸಿದಾಗ ಅವರು ಒಂದು ಮಾತು ಹೇಳಿದರು .

ನೀವು ಸಿಎಂ ಅಥವಾ ಪಿಎಂ ಫಂಡಿಗೆ ಯಾರಿಗೆ ನೀಡಿದರೂ ಅವರು ಸಹ ಬಡವ ಜನರಿಗೆ ಅಂಚು ಹಂಚುವುದು ತಾನೇ ನಮ್ಮ ಬಾಗೇಪಲ್ಲಿ ತಾಲ್ಲೂಕಿ ನಲ್ಲಿ ನಿರುದ್ಯೋಗ ಬಡವರು ಬಹಳ ಇದ್ದಾರೆ ನೀವು ಇಲ್ಲಿ ಹಂಚಹಳ್ಳಿ ಎಂದು ಅವರ ಮಾತು ನನ್ನ ಮನಸ್ಸಿನ ಮೇಲೆ ಮುಟ್ಟಿತ್ತು .
ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಅವರು ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾವು ನಮ್ಮ ಕ್ಷೇತ್ರ ತಾಲ್ಲೂಕುಗಳ ಜನತೆಗೆ ಮೊದಲು ಆದ್ಯತೆ ನೀಡಬೇಕು ಪ್ರತಿಯೊಬ್ಬರೂ ಉತ್ತಮ ರೀತಿ ಯಲ್ಲಿ ಕಾರ್ಯ ಕೆಲಸ ಮಾಡಬೇಕು ನಮ್ಮಿಂದ ಕನಿಷ್ಠ ನಾಲ್ಕು ಜನರಿಗೆ ಆದರೂ ಸಹಾಯ ಮಾಡಿದಾಗ ಮಾತ್ರ ನಮ್ಮ ಬದುಕು ಅರ್ಥವಿರುತ್ತದೆ ಎಂದು ತಿಳಿಸಿದರು .

ಕರುಣ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಲಾಕ್ ಡಾನ್ ಆದ ಹಿನ್ನಡೆಯಲ್ಲಿ ವ್ಯಾಪಾರ ವಹಿವಾಟು ನಿಂತಿದೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ ಸುಮಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಇಂತಹ ಸಂದರ್ಭದಲ್ಲಿ ಬಡಜನರಿಗೆ ಸಹಾಯ ಮಾಡುವುದರಿಂದ ಆ ದೇವರು ಸಹಾ ಮೆಚ್ಚುತ್ತಾನೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಅಮರನಾಥ ರೆಡ್ಡಿ ಸರ್ಕಲ್ ಇನ್ಸ್ಪೆಕ್ಟರ್ ನಯಾಜ್ ತಾಲ್ಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಸತ್ಯನಾರಾಯಣ ರೆಡ್ಡಿ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಆನಂದ್, ಹಜರತ್, ಅಮರಪ್ಪ, ಇತರರು ಹಾಜರಿದ್ದರು