ಅರ್ಚಕ,ಆಗಮಿಕರ ಒಕ್ಕೂಟ ದಿಂದ ಅರ್ಚಕರಿಗೆ ದಿನಸಿಕಿಟ್ ವಿತರಣೆ

79

ಮಂಡ್ಯ/ಮಳವಳ್ಳಿ:ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ – ಆಗಮೀಕರ ಮತ್ತು ಉಪಾಧಿವಂತರ ಒಕ್ಕೂಟವತಿಯಿಂದ ಮಳವಳ್ಳಿ ತಾಲ್ಲೂಕಿನ ಆರ್ಚಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ. ಮಳವಳ್ಳಿ ಪಟ್ಟಣದ ಕೋಟೆ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಸಲಾಯಿತು.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ – ಆಗಮೀಕರ ಮತ್ತು ಉಪಾಧಿವಂತರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಕೆ.ಎಸ್ ಸತೀಸ್ ಹಾಗೂ ಗೌರವಾಧ್ಯಕ್ಷ ಹೆಚ್ .ವಿ ಚಂದ್ರಶೇಖರ್ ನೇತೃತ್ವದಲ್ಲಿ ತಾಲ್ಲೂಕಿನ ಎಲ್ಲಾ ದೇವಸ್ಥಾನದ ಅರ್ಚಕರಿಗೆ ಹಾಗೂ ನೌಕರರಿಗೆ ಆಹಾರ ಕಿಟ್ ವಿತರಿಸಲಾಯಿತು.
ಇನ್ನೂ ಒಕ್ಕೂಟದ ತಾಲ್ಲೂಕು ಅಧ್ಯಕ್ಷ. ಸತೀಸ್ ವಾಹಿನಿಯೊಂದಿಗೆ ಮಾತನಾಡಿ,ರಾಜ್ಯ ಘಟಕ ದಿಂದ ತಾಲ್ಲೂಕಿನ ಎಲ್ಲಾ ಅರ್ಚಕರಿಗೆ ನೌಕರರಿಗೆ ದಿನಸಿ ಕಿಟ್ ಸುಮಾರು 80 ಮಂದಿಗೆ ವಿತರಿಸಲಾಯಿತು.
ಒಕ್ಕೂಟದ ಪ್ರದಾನಕಾರ್ಯದರ್ಶಿಶ್ರೀಕಂಠಸ್ವಾಮಿ ವಾಹಿನಿಯೊಂದಿಗೆ ಮಾತನಾಡಿ,ಮಳವಳ್ಳಿ ತಾಲ್ಲೂಕಿ ಗೆ ಬಹುತೇಕ ಅರ್ಚಕರು ಸಂಕಷ್ಟ ದಲ್ಲಿದ್ದು,ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೀಡುವಂತೆ ತಹಸೀಲ್ದಾರ್ ಗೆ ಮನವಿಪತ್ರ ಸಲ್ಲಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನಕಾರ್ಯದರ್ಶಿಶ್ರೀಕಂಠ ಸ್ವಾಮಿ,ಉಪಾಧ್ಯಕ್ಷ ವೀರತಪ್ಪ,ದಾನಿಗಳಾದ ಕೃಷ್ಣ ಶೆಟ್ಟಿ, ಹಾಗೂ ತಾಲ್ಲೂಕಿನ ಎಲ್ಲಾ ದೇವಸ್ಥಾನದ ಅರ್ಚಕರು ಇದ್ದರು,

ವರದಿ : ಎ.ಎನ್ ಲೋಕೇಶ್.