ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯು ವತಿಯಿಂದ ಮನವಿ.

53

ಮಂಡ್ಯ/ಮಳವಳ್ಳಿ:ಮುಂಚೂಣಿಯಲ್ಲಿರುವ ಕಾರ್ಮಿಕರ ಸುರಕ್ಷತೆಗೆ ಹಾಗೂ ವಿವಿಧ ಬೇಡಿಕೆ ಗಳಿಗೆ ಒತ್ತಾಯಿಸಿ ಸಿಐಟಿಯು ಸಂಘಟನೆ ಮಳವಳ್ಳಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಸಿಐಟಿಯು ಸಂಘಟನೆ ರಾಜ್ಯ ಕಾರ್ಯದರ್ಶಿ ಜಿ.ರಾಮ ಕೃಷ್ಣ ಹಾಗೂ ತಾಲ್ಲೂಕು ಸಂಚಾಲಕ ತಿಮ್ಮೇಗೌಡ ನೇತೃತ್ವದಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಚಂದ್ರಮೌಳಿರವರಿಗೆ ಮನವಿ ಸಲ್ಲಿಸಿದರು.

ಇನ್ನೂ ಸಿಐಟಿಯು ಸಂಘಟನೆ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ ವಾಹಿನಿಯೊಂದಿಗೆ ಮಾತನಾಡಿ, ಕಂಟೈ ಮೆಂಟ್ ಹಾಗೂ ಕೆಂಪುವಲಯದಲ್ಲಿ ಕೆಲಸ ಮಾಡುತ್ತಿರುವ ಸುರಕ್ಷತೆಗಾಗಿ ಟಿಪಿಇ ಕಿಟ್ ಗಳನ್ನು ವಿತರಿಸಬೇಕು.ಕೋವಿಡ್19 ಕರ್ತವ್ಯ ದಲ್ಲಿರುವ ಎಲ್ಲಾ ಎನ್ ಹೆಚ್ಎಂ ಗುತ್ತಿಗೆ ಸ್ಕೀಂ ನೌಕರರಿಗೆ ಹೆಚ್ಚುವರಿ ಯಾಗಿ ಪ್ರತಿ ತಿಂಗಳು ರೂ 25 ಸಾವಿರ ಪ್ರೋತ್ಸಾಹ ಧನ ನೀಡಬೇಕು, ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ರೂ 7500 ನೀಡಬೇಕು, ಏ.22 ರಂದು ಕಲ್ಕುಣಿ ಗ್ರಾಮಪಂಚಾಯಿತಿ ಸಿಬ್ಬಂದಿ ಬಸವರಾಜು ರವರ ಕುಟುಂಬಕ್ಕೆ50ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಕುಮಾರ, ನಾಗಮ್ಮ, ಕೃಷ್ಣ, ಮುನೀರ್ ಪಾಷ, ಶಿವಮ್ಮ ಇದ್ದರು.

ವರದಿ .ಎ.ಎನ್ ಲೋಕೇಶ್