ತಪ್ಪು ತಿದ್ದುಕೊಳ್ಳಿ ಗುರುಗಳೇ……..

213

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲ ಎಂಬಂತೆ ಸಕಾ೯ರಿ ಶಾಲೆಗಳು ಬಿಂಬಿಸುತ್ತಿವೆ. ಶಾಲೆಯ ಪ್ರತಿ ಗೋಡೆಗಳ ಮೇಲೆ ಎಲ್ಲ ವಿಷಯಗಳ ಮಾಹಿತಿ ನೀಡುವ ಕಣಜವೇ ಇರುತ್ತದೆ. ಮಕ್ಕಳಿಗೆ ಗೋಡೆ, ಛಾವಣಿ, ನೆಲ, ಕಂಬ, ಕಾಂಪೌಂಡ್‌ ಎಲ್ಲವೂ ಮಾಹಿತಿ ಪುಸ್ತಕವಾಗಿದೆ. ಆದರೂ ಆ ಮಾಹಿತಿ ಪುಸ್ತಕವೇ ತಪ್ಪಾದರೆ ಮಕ್ಕಳ ಕಲಿಕೆಯು ತಪ್ಪಾಗುವುದರಲ್ಲಿ ಸಂಶಯ ವಿಲ್ಲ.ಹೌದು ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದ ಸಕಾ೯ರಿ ಪ್ರಾಥಮಿಕ ಶಾಲೆಯ ಗೋಡೆಯಲ್ಲಿ ಮಕ್ಕಳ ಕಲಿಕೆಗೆ ಸಹಕಾರಿಯಾಗುವ ಬರಹಗಳಾದ ಕನ್ನಡನಾಡು, ನುಡಿ, ಸಾಹಿತ್ಯ, ಸಾಹಿತಿಗಳು, ವಿಜ್ಞಾನ, ಗಣಿತ, ಸಂಶೋಧನೆ, ಶರಣರ, ಆದರ್ಶ ರಾಜಕಾರಣಿ ಹಾಗೂ ದೇಶದ ಇತಿಹಾಸ ಸಾರುವ ಬರಹ ಮತ್ತು ಭಾವಚಿತ್ರಗಳ ಸಮಗ್ರ ಮಾಹಿತಿ ನೀಡುವ ಬರಹಗಳನ್ನು ಕೋಣೆಯಲ್ಲಿ ಅಲಂಕಾರಗಳು, ಶಬ್ದ ರಚನೆ, ಭಾಷೆ, ಗಣಿತ, ರಾಷ್ಟ್ರೀಯ ಲಾಂಛನ, ರಾಷ್ಟ್ರಭಕ್ತಿ  ಬಿಂಬಿಸುವ ಮಹಾನ್‌ ನಾಯಕರ ಭಾವಚಿತ್ರಗಳನ್ನು ಹಾಕಲಾಗಿದೆ. ಮಕ್ಕಳ ಕಲಿಕೆಗೆ ಸಹಕಾರಿಯಾಗುವ ಬರಹಗಳನ್ನು ಇಲ್ಲಿ ಸಾಕ್ಷಿಕರಿಸಲಾಗಿದೆ ಆದರೆ ಜಿಲ್ಲೆಯ ಹೆಸರು ಮಾತ್ರ ಕೋಲಾರ ಎಂಬುದಾಗೆ ಉಳಿದುಕೊಂಡಿದೆ. ಅವಿಭಜಿತ ಕೋಲಾರ ದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಒಂಭತ್ತು ವಷ೯ ಕಳೆದು ಹತ್ತನೇ ವಷ೯ದಲ್ಲಿ್ದೆ. ಆದರೂ ಇಲ್ಲಿನ ಗೋಡೆ ಬರಹದ ತಪ್ಪು ಮಾಹಿತಿ ಬದಲಿಸಲು ಸಂಭಂಧಪಟ್ಟವರಿಗೆ ಸಮಯ ಸಿಗಲಿಲ್ಲವ ಅಥವಾ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ ಇದೊಂದು ಸಣ್ಣ ತಪ್ಪು ಕಲಿಯುವ ಮಕ್ಕಳಿಗೆ ಕನಫ್ಯೂಜ್ ಮಾಡುವುದರಲ್ಲಿ ಸಂದೇಹವಿಲ್ಲ ಮಕ್ಕಳ ತಪ್ಪಗಳನ್ನು ತಿದ್ದುವ ಗುರುಗಳು ಆದಷ್ಟು ಬೇಗ ಅವರ ತಪ್ಪನ್ನು ತಿದ್ದಿಕೊಳ್ಳುವರು ಎಂಬ ನಂಬಿಕೆ ನಮ್ಮದು.