ದಿನಸಿ ಕಿಟ್ ವಿತರಿಸಿದ ಪುರಸಭಾ ಸದಸ್ಯ.

71

ಮಂಡ್ಯ/ಮಳವಳ್ಳಿ:ದೇಶ ವ್ಯಾಪ್ತಿ ಕೊರೋನಾ ಹರಡುತ್ತಿರುವ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ. ನಗದ 4 ವಾರ್ಡಿನ ಜನರಿಗೆ ಸುಮಾರು250 ದಿನಸಿಕಿಟ್ ಗಳನ್ನು ಪುರಸಭಾಸದಸ್ಯ ಪುಟ್ಟ ಸ್ವಾಮಿ ವಿತರಿಸಿದ್ದಾರೆ. ಪಟ್ಟಣದ ನ್ಯೂ ಲೈಫ್ ಇಂಟರ್ ನ್ಯಾಷನಲ್ ಬೊರ್ಡಿಂಗ್ ಸ್ಕೂಲ್ ಆವರಣದಲ್ಲಿ ತಹಸೀಲ್ದಾರ್ ಚಂದ್ರಮೌಳಿ ಚಾಲನೆ ನೀಡಿದರು. ಬಳಿಕ ತಹಸೀಲ್ದಾರ್ ಚಂದ್ರಮೌಳಿ ಮಾತನಾಡಿ, ಸಂಕಷ್ಟದಲ್ಲಿರುವ ಜನರಿಗೆ ಪುರಸಭೆ ಸದಸ್ಯ ಪುಟ್ಟಸ್ವಾಮಿರವರು ನೆರವಿಗೆ ಬಂದಿದ್ದು ಅವರಿಗೆ ತಾಲ್ಲೂಕು ಆಡಳಿತ ಅಭಿನಂದಿಸುತ್ತದೆ ಎಂದರು. ಕಾರ್ಯಕ್ರಮ ದಲ್ಲಿ ಪುರಸಭೆ ಮುಖ್ಯಾಧಿಕಾರಿ ಗಂಗಾದರ್,ಜಿ.ಪಂ ಸದಸ್ಯೆ ಸುಜಾತಸುಂದ್ರಪ್ಪ, ಬೆಂಕಿಶ್ರೀನಿವಾಸ್,ಜಯರಾಮು,ಶಂಕರ್ ಸೇರಿ ದಂತೆ ಮತ್ತಿತ್ತರರು ಇದ್ದರು. ವರದಿ : ಎ.ಎನ್ ಲೋಕೇಶ್