ಮಾಜಿ-ಹಾಲಿ ಶಾಸಕರ “ಕೆಸಿವ್ಯಾಲಿ” ನೀರಿನ ರಾಜಕೀಯ.!?

627

ಕ್ಷೇತ್ರದ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸುವ ಬಗ್ಗೆ ದ್ವೇಷ ರಾಜಕಾರಣ ಮಾಡುತ್ತಿರುವ ಮಾಜಿ ಶಾಸಕರ ವಿರುದ್ಧ ಹಾಲಿ ಶಾಸಕ ಕೃಷ್ಣಾರೆಡ್ಡಿ ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರ/ ಚಿಂತಾಮಣಿ :ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಿಗೆ ಸೇರಿ 126ಕೆರೆಗಳಿಗೆ1500 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಐದು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದ್ದು ತಾಲೂಕಿನ ದಂಡುಪಾಳ್ಯ ಕೆರೆಯಲ್ಲಿ ಪೂಜೆ ಕಾರ್ಯಕ್ರಮವನ್ನು ಮಾಡಿದ್ದೇವೆ ಎಂದು ಕ್ಷೇತ್ರದ ಶಾಸಕರಾದ ಜೆ ಕೆ ಕೃಷ್ಣಾರೆಡ್ಡಿ ತಿಳಿಸಿದರು .

ತಾಲ್ಲೂಕಿನ ದಂಡುಪಾಳ್ಯ ಕೆರೆ ಬಳಿ ಪೂಜೆ ಮಾಡಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳಿಂದ ತಾಲ್ಲೂಕಿನಲ್ಲಿ ನಾನು ಜನರ ಸೇವೆ ಮಾಡುತ್ತಾ ಬಂದಿದ್ದೇನೆ ನನ್ನ ಸೇವೆಯನ್ನು ಗುರುತಿಸಿ ಎರಡು ಬಾರಿ ಕ್ಷೇತ್ರದ ಶಾಸಕರನ್ನಾಗಿ ನನಗೆ ಆಯ್ಕೆ ಮಾಡಿದ್ದಾರೆ.

ಕೆಸಿ ವ್ಯಾಲಿ ನೀರು ಕುರುಟಹಳ್ಳಿ ಕೆರೆಗೆ ಬಂದ ತಕ್ಷಣ ನಾನು ಕೆರೆ ಪರಿಶೀಲನೆ ನಡೆಸಿದಾಗ ಅಲ್ಲಿ ಸ್ವಚ್ಛತೆ ಇರಲಿಲ್ಲ ಹಾಗೂ ಜಾಲಿ ಮರಗಳು ಕಟಾವ್ ಮಾಡಿ ಕೆರೆಯಲ್ಲಿ ತುಂಬಿದ್ದು ಇದನ್ನು ಸ್ವಚ್ಛತೆ ಮಾಡಿ ನಂತರ ಕೆರೆಗೆ ನೀರು ಹರಿಸಿ ಎಂದು ಹೇಳಿರುತ್ತೇನೆ.
ಈ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಮಾಜಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಈ ಕ್ಷೇತ್ರದ ಜನರು ಅವರಿಗೆ ಎರಡು ಬಾರಿ ಸೋಲುತ್ತಿರಲಿಲ್ಲ .

ಕೆಸಿ ವ್ಯಾಲಿ ನೀರು ತರಲು ಮಾಜಿ ಶಾಸಕರು ನಾವೇ ಶ್ರಮ ಪಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.ಆದರೆ ಕೆಸಿ ವ್ಯಾಲಿ ನೀರು ತರಲು ಯಾರ ಶ್ರಮ ಎಷ್ಟಿದೆ ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಣ್ಣ ,ರಘುನಾಥ್ ರೆಡ್ಡಿ .ನಗರಸಭಾ ಸದಸ್ಯ ಮುರಳಿ,ಮುಖಂಡರಾದ ಗುಡೆ ಶ್ರೀನಿವಾಸರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ರೆಡ್ಡಪ್ಪ .ಅಮಾನುಲ್ಲಾ,ತನ್ವೀರ್ ಪಾಷಾ, ಜನಾರ್ದನ್ ,ಸೇರಿದಂತೆ ಹಲವರು ಹಾಜರಿದ್ದರು.

ವರದಿ:- ಇಮ್ರಾನ್ ಖಾನ್ ಚಿಂತಾಮಣಿ.