ಜಿಲ್ಲಾ ಪಂಚಾಯತಿ ಸದಸ್ಯನ ಅಕ್ರಮಗಳು ಬಹಿರಂಗ.!?

914

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ : ಕ್ಷೇತ್ರದ ಶಾಸಕ ಜೆ.ಕೃಷ್ಣಾರೆಡ್ಡಿ ಗೃಹ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು ಜಿಲ್ಲಾ ಪಂಚಾಯಿತಿ ಸದಸ್ಯ ಸ್ಕೂಲ್ ಸುಬ್ಬಾರೆಡ್ಡಿ ಇತ್ತೀಚೆಗೆ ಜೆಡಿಎಸ್ ಪಕ್ಷದ ಮುಖಂಡರ ಮೇಲೆ ಇಲ್ಲ ಸಲ್ಲದ ಆರೋಪ ಗಳನ್ನು ಮಾಡುತ್ತಿದ್ದು, ಶಾಸಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಖಂಡನೀಯ ಎಂದು ತಮ್ಮಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸ್ಕೂಲ್ ಸುಬ್ಬಾರೆಡ್ಡಿ ಅವರು ಈಗಾಗಲೇ ಅನೇಕ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ಗಳಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದ ಸಂಗತಿ ಉದಾಹರಣೆಗೆ ಒಂದೇ ಪಹಣಿ ಮೇಲೆ ನಾಲ್ಕು ಬ್ಯಾಂಕುಗಳಲ್ಲಿ 31ಲಕ್ಷ ಸಾಲ‌ ಪಡೆದಿರುವ ದಾಖಲೆ ಗಳು ಮತ್ತು ಕಾನೂನುಬಾಹಿರ ಚಟುವಟಿಕೆ ಗಳಲ್ಲಿ ತೊಡಗಿ,ಕೋರ್ಟಿನ ಅರೆಸ್ಟ್ ವಾರೆಂಟ್ ಪತ್ರ ಗಳನ್ನು ಇಂದು ಪತ್ರಿಕಾಗೋಷ್ಠಿ ಯಲ್ಲಿ ಪ್ರದರ್ಶಿಸಿದ್ದಾರೆ.

ಅವರು ಮಾಡಿರುವ ಅನೇಕ ಕಾನೂನು ಬಾಹಿರ ಕಾರ್ಯಗಳಿಗೆ ಸಂಬಂಧಿಸಿದ ಹಲವು ದಾಖಲೆ ಗಳು ಮಾಧ್ಯಮ ಮಿತ್ರರ ಮುಂದಿಟ್ಟಿದ್ದಾರೆ. ಅಲ್ಲದೆ ಇನ್ನಾದರೂ ಸ್ಕೂಲ್ ಸುಬ್ಬಾರೆಡ್ಡಿ, ಶಾಸಕರ ವಿರುದ್ಧ ಸುಳ್ಳುಆರೋಪ ಮಾಡುವು‌ ದನ್ನು ನಿಲ್ಲಿಸದಿದ್ದರೆ ಮುಂದಿನ ದಿನ ಗಳಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪತ್ರಕಾಗೋಷ್ಟಿಯಲ್ಲಿ ನಗರಸಭಾ ಸದಸ್ಯ ಮುರಳಿ, ಮುಖಂಡರಾದ ವಿ.ಅಮರ್,ಸಿಕೆ. ಶಬ್ಬೀರ್,ಶೇಖ್ ಸಾಧಿಕ್ ರಜ್ವಿ,ಅಲ್ಲೂ,ಅನಿಲ್, ವೆಂಕಟರವಣಪ್ಪ, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.