ಪುಣ್ಯಸ್ಮರಣೆ ಕಾರ್ಯಕ್ರಮ.

160

ಮಂಡ್ಯ/ಮಳವಳ್ಳಿ:ಜಯ‌ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ‌ ವತಿಯಿಂದ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ.ಮುತ್ತಪ್ಪ ರೈ ಅಣ್ಣನವರ ಪುಣ್ಯಸ್ಮರಣೆ ಕಾರ್ಯಕ್ರಮ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ.ರಮೇಶ್ ನೇತೃತ್ವದಲ್ಲಿ ಪುರಸಭೆ ಸದಸ್ಯ ಪುಟ್ಟಸ್ವಾಮಿರವರು ದಿ .ಎನ್ ಮುತ್ತಪ್ಪ ರೈ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಕಡುಬಡವರು ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಯನ್ನು ಪ್ಯಾಕೆಟ್ ಮಾಡಿ ಪಾರ್ಸಲ್ ಮೂಲಕ ನೀಡಲಾಯಿತು. ಇನ್ನೂ ತಾಲ್ಲೂಕು ಅಧ್ಯಕ್ಷ ರಮೇಶ್ ರವರು ಜಯ ಕರ್ನಾಟಕ ಸಂಘಟನೆ ಆಧಾರ ಸ್ಥಂಭ ವಾಗಿದ್ದ. ಜಯಕರ್ನಾಟಕ ಸಂಘಟನೆಯ ಜನಕ ರವರು ನಮ್ಮನಗಲಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗುವ ಅದಕ್ಕೆ ಶಕ್ತಿ ತುಂಬಲಿ ಎಂದರು. ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆ ಜಿಲ್ಲಾಉಪಾಧ್ಯಕ್ಷ ನಾಗೇಶ್,ತಾಲ್ಲೂಕು ಕಾರ್ಯದರ್ಶಿ ಗುರುಸಿದ್ದಯ್ಯ,ಚಂದ್ರು,ಕಲ್ಲೇಶ್,ಅನಂತ ಪುರಸಭೆ ಸದಸ್ಯ ಪುಟ್ಟಸ್ವಾಮಿ ಸೇರಿದಂತೆ ಮತ್ತಿತ್ತರರು ಇದ್ದರು