ಕೊರೋನಾ ಸೋಂಕು ನಿವಾರಣೆಗೆ ಹೋಮ,ಹವನ.!

75

ಮಂಡ್ಯ/ಮಳವಳ್ಳಿ:ಕೋವಿಡ್ 19 ಎಂಬ ಮಹಾಮಾರಿ ಜನರಿಂದ ದೂರವಾಗಲಿ ಎಂದು ಶ್ರೀ ರಾಮರೂಡ ಮಠವತಿಯಿಂದ ಮಳವಳ್ಳಿ ಪಟ್ಟಣದ ಗಂಗಾ ಪರಮೇಶ್ವರಿ ದೇವಸ್ಥಾನ ಮುಂದೆ ಹೋಮ ಹವನ ನಡೆಸಲಾಯಿತು. ಪಟ್ಟಣದ ಮದ್ದೂರು ರಸ್ತೆಯಲ್ಲಿರುವ ಶ್ರೀ ರಾಮ ರೂಢ ಮಠದ ಆವರಣದಲ್ಲಿರುವ ಗಂಗಾ ಪರಮೇಶ್ವರಿ ದೇವಸ್ಥಾನದ ಮುಂಭಾಗ ಶ್ರೀರಾಮ ರೂಢ ಮಠದ ಬಸವಾನಂದ ಸ್ವಾಮೀಜಿ ದೇಶದ ಜನರ ಸುಬಿಕ್ಷವಾಗಿರಲಿ ಜೊತೆಗೆ ದೇಶ ವ್ಯಾಪ್ತಿ ಹರಡುತ್ತಿರುವ ಕೋರಾನಾ ನಾಶವಾಗಲಿ, ಸಾರ್ವಜನರು ಸುಖಕರ ವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಲಾಯಿತು.ಹೋಮ ವನ್ನು ಮಳವಳ್ಳಿಪಟ್ಟಣದ ಕೋಟೆ ಬೀದಿಯಲ್ಲಿನ ವಾಸುದೇವ ಮೂರ್ತಿರವರು ನಡೆಸಿಕೊಟ್ಟರು. ಬೆಳಗ್ಗೆ ಏಳು ಗಂಟೆಯಿಂದ ಪ್ರಾರಂಭವಾಗಿ ಒಂದು ಗಂಟೆಯವರೆಗೂ ಹೋಮ ನಡೆಸಲಾಯಿತು. ಇನ್ನೂ ಇದೇ ವೇಳೆ ಆಟೋಮಂಜು , ಸೇರಿದಂತೆ ಗಂಗಮತ ಬೀದಿ ಯಜಮಾನರುಗಳು. ಮುಖಂಡರು ಉಪಸ್ಥಿತರಿದ್ದರು. ಬೈಟ್: ಬಸವಾನಂದ ಸ್ವಾಮೀಜೀ. ಶ್ರೀ ರಾಮರೂಢ ಮಠ . ಮಳವಳ್ಳಿ. ವರದಿ : ಎ.ಎನ್ ಲೋಕೇಶ್