ಪ್ರತಿಜ್ಞಾವಿಧಿ ಆನ್ಲೈನಲ್ಲಿ ವೀಕ್ಷಿಸಿದ “ಕೈ” ಕಾರ್ಯಕರ್ತರು.

78

ಮಂಡ್ಯ/ಮಳವಳ್ಳಿ: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣರದ್ದಾದ ಹಿನ್ನಲೆಯಲ್ಲಿ ಕೋವಿಡ್ 19 ಬಗ್ಗೆ ಇಂದು ಪ್ರತಿಜ್ಞಾ ವಿಧಿ ಭೋದಿಸುವುದನ್ನು ಅನ್ ಲೈನ್ ಮೂಲಕ ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಕಾಂಗ್ರೇಸ್ ಕಾರ್ಯ ಕರ್ತರು ವೀಕ್ಷಿಸಿದ್ದರು. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂರಾರು ಕಾರ್ಯಕರ್ತರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದೇವರಾಜು, ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಳವಳ್ಳಿ ಕ್ಷೇತ್ರದ ಉಸ್ತುವಾರಿ ಹರೀಶ್ ಬಾಬು ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರು ,ಮಾಜಿ ಅಧ್ಯಕ್ಷರು ಜಿ.ಪಂ‌ಸದಸ್ಯರು, ಪುರಸಭೆ ಸದಸ್ಯರು,ಮಾಜಿ ಸದಸ್ಯರು, ಸೇರಿ ದಂತೆ ನೂರಾರು ಮುಖಂಡರು ವೀಕ್ಷಿಸಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದೇವರಾಜು ವಾಹಿನಿ ಯೊಂದಿಗೆ ಮಾತನಾಡಿ, ಕೋವಿಡ್ 19 ಬಗ್ಗೆ ಕೆಪಿಸಿಸಿ ರಾಜ್ಯಾಧ್ಯಕ್ಷ. ಡಿ.ಕೆ ಶಿವಕುಮಾರ ರವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಯಂತ್ರಣ ಮಾಡಲು ವಿಫಲವಾಗಿದೆ. ಆದರೆ ಕಾಂಗ್ರೇಸ್ ರಾಜ್ಯ ಜನತೆಯ ಜೊತೆ ನಾವಿದ್ದೇವೆ ಎಂದು ಸಂದೇಶ ಸಾರಿದರು. ಇನ್ನೂ ಈಗಾಗಲೇ ಮಾಜಿಸಚಿವ ಪಿ.ಎಂ ನರೇಂದ್ರಸ್ವಾಮಿ ರವರು ಮಳವಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ 39 ಗ್ರಾಮಪಂಚಾಯಿತಿ ಎಲ್ಲಾ ಕಡೆ ಸ್ಯಾನಿಟರಿ ಹಾಗೂ ಮಾಸ್ಕ್ ನೀಡಿದ್ದಲ್ಲದೇ ಸೀಲ್ ಡೌನ್ ಪ್ರದೇಶದ ಜನರಿಗೆ ಹಾಗೂ ಪಟ್ಟಣದ ಜನರಿಗೆ ಆಹಾರಕಿಟ್ ವಿತರಿಸಿದ್ದಾರೆ ಎಂದರು. ಇನ್ನೂ ಕಾರ್ಯಕ್ರಮದಲ್ಲಿ ವಿತ್ತ ಕಾಂಗ್ರೇಸ್ ವೀಕ್ಷಕ ರಾಮಕೃಷ್ಣ, ಪೆಟ್ರೋಲ್ ಬಂಕ್ ಮಹ ದೇವು,ತಾ.ಪಂ ಮಾಜಿಅಧ್ಯಕ್ಷ ವಿಶ್ವಾಸ್, ನಾಗೇಶ್ ಪುರಸಭೆಸದಸ್ಯ ಶಿವಸ್ವಾಮಿ, ಮುಖಂಡರು ಶಿವ ಕುಮಾರ, ವೆಂಕಟೇಶ್ ಸೇರಿದಂತೆ ಮತ್ತಿತ್ತರರು ವರದಿ: ಎ.ಎನ್ ಲೋಕೇಶ್