ನಿರಾಶ್ರಿತರಿಗೆ ನಿವೇಶನ ನೀಡುವಂತೆ ಒತ್ತಾಯ

40
ಬೆಂಗಳೂರು/ ಕೆ.ಆರ್‌.ಪುರ: ಚನ್ನ ಸಂದ್ರ  ಹಾಗೂ ಕುಂಬೇನ ಅಗ್ರಹಾರ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇದ್ದರೂ ಸರ್ವೇ ಮಾಡಿ ಇಲ್ಲಿ ಯಾವುದೆ ಸರ್ಕಾರಿ ಜಮೀನು ಇಲ್ಲಾ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನಾ ರಾಜ್ಯದ್ಯಕ್ಷ ಜಿಗಣಿ ಶಂಕರ್ ಆಪಾದಿಸಿದರು. ನಿವೇಶನವನ್ನು ಹಂಚಿಕೆ ಮಾಡಲು ವತ್ತಾಯಿಸಿ ಬೆಂಗಳೂರು ಪೂರ್ವ ತಾಲೂಕು ಕಛೇರಿ ಮುಂದೆ  ಕರ್ನಾಟಕ ದಲಿತ ರಕ್ಷಣಾವೇದಿಕೆ ಹಾಗು ಕರ್ನಾಟಕ ರಿಪಬ್ಲಿಕ್ ಸೇನಾ ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ ಪ್ರತಿನಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರದ ವತಿಯಿಂದ ಒಂದು ಲಕ್ಷ ಎಕರೆ ಜಾರಿ ಮಾಡಿ ಬಿಲ್ಡರ್ ಹಾಗೂ ಭೂಗಳ್ಳರಿಗೆ ನೀಡುತ್ತಿದ್ದು ಬಡವರಿಗೆ ನಿವೇಶನ ಹಂಚಲು ಮೀನವೇಶ ಮಾಡುತ್ತಿದ್ದಾರೆ ಎಂದು ದೂರಿದರು.ಸ್ವಾತಂತ್ರ್ಯ ಪೂರ್ವ ದಿಂದಲೂ ಹಿಂದೂ ಧರ್ಮದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಾ ಬಂದಿದ್ದಾರೆ ಎಂದರು.ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋ ದಲ್ಲಿ  ದಲಿತ ಯುವಕರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ ಇದನ್ನು ಹೇಗೆ ಸಹಿಸಲು ಸಾದ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವುದೆ ಸರ್ಕಾರಗಳು ಆಳ್ವಿಕೆ ನಡೆಸಿದರೂ ಬಡವರಿಗೆ ಬದುಕಲು ಒಂದು ನಿವೇಶನ ನೀಡದೆ ಭೂಗಳ್ಳರ ಪರ ಕಾರ್ಯ ನಿರ್ವಹಿಸುತ್ತಿರುವುದು ಕಂಡನೀಯ ವಿಚಾರ ಎಂದರು.ಸರ್ಕಾರಕ್ಕೆ ಪದೇಪದೇ ಮನವಿ ಸಲ್ಲಿಸಿದರೂ ಪ್ರಯೋಜನ ವಾಗದ ಕಾರಣ ಇದರ ಸಂಬಂಧಿಸಿದಂತೆ ಡಿ.ಸಿ.ಕಛೇರಿ ಮುಂದೆ ಉಗ್ರ ಹಾರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯದ್ಯಕ್ಷ  ಸೋರ ಹುಣಿಸೆ ವೆಂಕಟೇಶ್, ಕೆ.ಆರ್.ಎಸ್.ಕಾರ್ಮಿಕ ಘಟಕ ರಾಜ್ಯದ್ಯಕ್ಷ ಕನ್ನಲಿ ಕೃಷ್ಣಪ್ಪ, ಜೆ.ಕೃಷ್ಣಪ್ಪ,ಬೆಳತೂರು ವೆಂಕಟೇಶ್, ಕಾವೇರಪ್ಪ  ಮುಂತಾದವರು ಹಾಜರಿದ್ದರು.

SHOW LESS