ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆಗೆ ಸಕಲ ಸಿದ್ಧತೆ.

50

ಚಿಕ್ಕಬಳ್ಳಾಪುರ/ಚಿಂತಾಮಣಿ:ಕೆಪಿಸಿಸಿ ಅಧ್ಯಕ್ಷ ರಾಗಿ ಡಿ.ಕೆ.ಶಿವಕುಮಾರ್ ಅವರು ಇದೇ ಜುಲೈ 2 ರಂದು ಪದಗ್ರಹಣ ಮಾಡಲಿದ್ದು,ಆ ಕಾರ್ಯಕ್ರಮ ವೀಕ್ಷಿಸಲು ರಾಜ್ಯದ ಎಲ್ಲಾಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವೀಕ್ಷಣೆ ಮಾಡಲೆಂದು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ನೇರ ವೀಕ್ಷಣೆಗೆ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ‘ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉದೇ ಶಂಕರ್ ಅವರು ತಿಳಿಸಿದರು.ಆವರು ನಗರದ ರಾಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಡಿಕೆಶಿ ಪದಗ್ರಹಣ ಕಾರ್ಯ ಕ್ರಮವನ್ನು ಅತ್ಯಂತ ವಿಜೃಂಭಣೆ ಯಿಂದ ರಾಜ್ಯದ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ ಮಾಡಬೇಕು ಎಂದು ಚಿಂತಿಸಿದ್ದರು.ಆದರೆ ಕೊರೋನಾ ಕಾರಣದಿಂದ ಇಂದು ಅದು ಸಾಧ್ಯವಾಗುತ್ತಿಲ್ಲ.ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ಇನ್ನಷ್ಟು ಹುರುಪು ತುಂಬು ವಂತಾಗಲಿದೆ.ಚಿಂತಾಮಣಿ ತಾಲೂಕಿನ 35 ಗ್ರಾಮ ಪಂಚಾಯಿತಿಗಳಲಿ ಕಾರ್ಯ ಕ್ರಮ ನಿರ್ವಹಿಸಲು ಕರ್ಯಕರ್ತರಿಗೆ ಮಾಹಿತಿ ನೀಡುವ ಸಲುವಾಗಿ ಇಂದು ಸಭೆ ಹಮ್ಮಿ ಕೊಂಡಿದ್ದೇವೆ ಎಂದು ತಿಳಿಸಿದರು . ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೂರ ದರ್ಶನದ ಮೂಲಕ ಅಂದರೆ ಟಿವಿ ಚಾನಲ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ ಅದರಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿ ಕೈಗಳಿಗೆ ಸ್ಯಾನೀಟೆಸ್ ಬಳಸಬೇಕು,ಮತ್ತು ಸಾಮಾಜಿಕ ಅಂತರ ಕಾಯಿದ ಕೋಳ ಬೇಕು ಇದರ ಎಲ್ಲಾ ಜವಾಬ್ದಾರಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಸಬಾ ಹೋಬಳಿಯ ಅಥಾ ವುಲ್ಲಾ ಮತ್ತು ಮುಂಗಾನಹಳ್ಳಿ ಹೋಬಳಿಯ ವೀರಪ್ಪ ಅವರಿಗೆ ಒಪ್ಪಿಸಿದರು. ಈ ಸಂಧರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿಯಾಗಿ ಕುಮಾರ್ ಮತ್ತು ಅಶ್ವಿನಿ ಕೃಷ್ಣಮೂರ್ತಿ,ಜಿಲ್ಲಾ ಉಪಾದ್ಯಕ್ಷ ಅಬ್ದುಲ್ ಖಾದರ್ ,ಕಾಂಗ್ರೆಸ್ ಮುಖಂಡರು ಗ್ಯಾಸ್ ಶ್ರೀನಿವಾಸ್,ಕಾರ್ಯದರ್ಶಿ ಕೊನಪಲ್ಲಿ ಕೋದಂಡ, ನಗರ ಸಭಾಸದಸ್ಯ ಮುರಳಿ, ವಕೀಲರ ಅಧ್ಯಕ್ಷ ರಾಜಾರಾಮ್, ನಾರಾಯಣ ಸ್ವಾಮಿ, ಶಿವಾರೆಡ್ಡಿ, ಶ್ರೀನಿವಾಸ್,ಹಿರಿಯ ವಕೀಲ ರಾದ ಅನ್ವರ್,ಲಿಂಗಪ್ಪ ,ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್,ಮತ್ತು ಕಾಂಗ್ರೆಸ್ ನ ಮುಖಂಡರು , ಕಾರ್ಯಕರ್ತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.