ಪೆರೇಡ್ ಬದಲು… ಪೊಲೀಸರ ಶ್ರಮದಾನ.!

48

ಚಿಕ್ಕಬಳ್ಳಾಪುರ/ ಚಿಂತಾಮಣಿ:ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ನಗರ ಪೊಲೀಸರಿಂದ ಇಂದು ಪೊಲೀಸ್ ಪೆರೇಡ್ ಬದಲಿಗೆ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ನಗರ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನವರ ನೇತೃತ್ವದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಚಿಂತಾಮಣಿಯಲ್ಲಿ ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಚಿಂತಿಸಲಾಗುತ್ತಿದೆ ಅದಕ್ಕೆ ಸಂಬಂಧಪಟ್ಟಂತೆ ವರದಾದ್ರಿ ಬೆಟ್ಟದ ಮೇಲೆ ಒಂದು ಟವರ್ ಅಳವಡಿಕೆ ಮಾಡಬೇಕಾಗಿರುತ್ತದೆ ಆದ್ದರಿಂದ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಗಳು ಇದರ ಬಗ್ಗೆ ಸಮಾಲೋಚನೆ ನಡೆಸಿ ಟವರ್ ಅಳವಡಿಸಲು ಬೇಕಾಗುವ ಮರಳು ಸಿಮೆಂಟ್ ಹಾಗೂ ಜಲ್ಲಿ ಯನ್ನು ಶ್ರಮದಾನದ ಮುಖಾಂತರ ಬೆಟ್ಟದ ಮೇಲೆ ಸಾಗಿಸಲು ಇಲಾಖೆಯ ಎಲ್ಲಾ ಸಿಬ್ಬಂದಿ ಯನ್ನು ಬಳಸಿಕೊಳ್ಳಲಾಯಿತು. ಎಲ್ಲಾ ಪೊಲೀಸ್ ಸಿಬ್ಬಂದಿ ಬೆಳಗ್ಗೆಯೇ ಅತ್ಯುತ್ಸಾಹದಿಂದ ಮರಳು ಹಾಗೂ ಜಲ್ಲಿ ಮೂಟೆಗಳನ್ನು ಕೆಳಗಿನಿಂದ ವರದಾದ್ರಿ ಬೆಟ್ಟಕ್ಕೆ ಸಾಗಿಸಿದರು ತಮಗೆ ಹಾಗೂ ಚಿಂತಾಮಣಿಗೆ ಉಪಯೋಗವಾಗುವ ಯಾವುದೇ ಕೆಲಸ ಮಾಡಲು ನಾವು ಸದಾ ಸಿದ್ಧರಿದ್ದೇವೆ ಎಂಬುದನ್ನುಚಿಂತಾಮಣಿ ಪೊಲೀಸ್ ಸಿಬ್ಬಂದಿ ತೋರಿಸಿಕೊಟ್ಟರು.