ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪಂಚಾಯತಿ ನೌಕರರ ಸಂಘದಿಂದ ಪ್ರತಿಭಟನೆ. ‌

55

ಮಂಡ್ಯ/ಮಳವಳ್ಳಿ:ಗ್ರಾಮಪಂಚಾಯಿತಿ ನೌಕರರ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಂದಿ ಸರ್ಕಾರ ದ ವಿರುದ್ದ ಘೋಷಣೆ ಕೂಗಿದರು.

ಕಂಪ್ಯೂಟರ್ ಅಪರೇಟರ್ ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಲ್ಲಿ ತಿದ್ದುಪಡಿ ಮಾಡಬೇಕು. ಕರ ವಸೂಲಿಗಾರ ಮತ್ತುಕಂಪ್ಯೂಟರ್ ಕೋಟಾ ಹುದ್ದೆಗೆ ಶೇ 70 ನಿಂದ ಶೇ 100 ಕೋಟಾ ಹೆಚ್ಚಿಸಬೇಕು, ಸೇವಾ ನಿಯಮಾವಳಿ ಗೆಜೆಟ್ ಪ್ರಕಟಣೆಯಾಗಿದ್ದು ತಿದ್ದುಪಡಿ ಪರಿಶೀಲಿಸಿ ತಕ್ಷಣ ಆದೇಶ ಹೊರಡಿಸಬೇಕು ಸೇರಿದಂತೆ 6 ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಗ್ರಾಮಪಂಚಾಯಿತಿ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ತಿಮ್ಮೇಗೌಡ, ನವೀನ್, ಬಸವಲಿಂಗೇಗೌಡ, ನಾಗರಾಜು, ರೇಣುಕಮ್ಮ, ಸೇರಿದಂತೆ ಮತ್ತಿತ್ತರರು ಇದ್ದರು

ವರದಿ : ಎ.ಎನ್ ಲೋಕೇಶ್