ಅಂಬೇಡ್ಕರ್ ಸ್ವಗೃಹ ಮೇಲೆ ದುಷ್ಕರ್ಮಿಗಳ ಅಟ್ಟಹಾಸ.

61

ಬೆಂಗಳೂರು/ಕೆ.ಆರ್.ಪುರ:ಮುಂಬೈನ ದಾದರ್ ನಲ್ಲಿರುವ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ ಸ್ವಗೃಹ ರಾಜಗೃಹದ ಮೇಲೆ ದುಷ್ಕರ್ಮಿಗಳು ಆಕ್ರಮಣ ಮಾಡಿ ಸಿ.ಸಿ.ಟಿವಿ, ಕಿಟಕಿ ಗಾಜುಗಳು ಮತ್ತು ಇತರೆ ವಸ್ತುಗಳನ್ನು ದ್ವಂಸ ಮಾಡಿರುವ ಘಟನೆಯನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾದ್ಯಕ್ಷ ಸೋರಹುಣಿಸೆ ವೆಂಕಟೇಶ ಖಂಡಿಸಿದರು.

ಅಂಬೇಡ್ಕರ್ ಸ್ವಗೃಹವಾದ ರಾಜಗೃಹದ ಮೇಲೆ ಕಿಡಿಗೇಡಿಗಳಿಂದ ನಡೆದಿರುವ ಘಟನೆ ಯನ್ನು ವಿರೋಧಿಸಿ ಬೆಂಗಳೂರು ಪೂರ್ವ ತಾಲ್ಲೂಕು ಕಛೇರಿ ಮುಂದೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

ಭಾರತ ಸ್ವಾತಂತ್ರ ಪಡೆದ ನಂತರ ಡಾ.ಬಿ.ಆರ್.ಅಂಬೇಡ್ಕರ್ ರವರು ಈ ದೇಶಕ್ಕೆ ಸಂವಿಧಾನವನ್ನು ನೀಡಿ ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸಮಾನವಾದ ಹಕ್ಕನ್ನು ನೀಡಿ ಯಾರು ಯಾರಿಗೂ ಗುಲಾಮರಲ್ಲ ಎಂದು ಸಾರುವ ಸಂವಿಧಾನದ ನೀಡಿರುತ್ತಾರೆ ಎಂದರು.

ಈ ದೇಶದ ಬಹುಸಂಖ್ಯಾತ ಅಸ್ಪೃಶ್ಯರು, ಧಾರ್ಮಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಎಲ್ಲಾ ರೀತಿಯ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಿ ಮೀಸಲಾತಿ ಕಾನೂನನ್ನು ಅಸ್ತ್ರವನ್ನಾಗಿ ಮಾಡಿ ಗುಲಾಮದಿಂದ ಮೃಲೆತ್ತುವ ಕಾರ್ಯ ಅಂಬೇಡ್ಕರ್ ಮಾಡಿರುತ್ತಾರೆ ಎಂದರು.

ಆದರೆ ಮನು ವಾದಿಗಳು ಅವರಿಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಶೂದ್ರರು, ಅಸ್ಪೃಶ್ಯರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಒಂದಲ್ಲ ಒಂದು ರೀತಿ ಮಾನಸಿಕವಾಗಿ, ದೈಹಿಕ ವಾಗಿ ಮತ್ತು ಬೌದ್ಧಿಕವಾಗಿ ಹಲ್ಲೆ ಮಾಡುತ್ತಾ ಬಂದಿದ್ದಾರೆ ಎಂದು ದೂರಿದರು.

ಈ ಕೃತ್ಯ ದಿಂದ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದ್ದು ಇದು ಬಾಬಾ ಸಾಹೇಬರಿಗೆ ಮಾಡಿರುವ ಅಪಮಾನವಾಗಿರುತ್ತದೆ ಎಂದು ಕಿಡಿಕಾರಿದರು.

ನಮ್ಮ ದೇಶದ ಭಾವನಾತ್ಮಕ ಸಂಬಂಧವನ್ನು ಕೂಡಲೇ ಬಂದಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಸತ್ಯವತಿ, ನಗರ ಜಿಲ್ಲಾ ಅದ್ಯಕ್ಷ ದೇವರಾಜ್, ರಾಜ್ಯ ಯುವ ಘಟಕ ಅದ್ಯಕ್ಷ ವಿಜಯ್ ಕುಮಾರ್, ನಗರ ಜಿಲ್ಲಾ ಯುವ ಘಟಕ ಅಧ್ಯಕ್ಷ ಕೇಶವ, ನಗರ ಜಿಲ್ಲಾ ಮಹಿಳಾ ಅದ್ಯಕ್ಷೆ ಮೇಘಳ, ಪಧಾದಿಕಾರಿಗಳಾದ ರೂಪ, ನರಸಿಂಹಯ್ಯ, ಮೈಥಿಲಿ, ಸುಬ್ರಮಣ್ಯ ಸೇರಿದಂತೆ ಇತರರು ಹಾಜರಿದ್ದರು.

ಬೈಟ್: ಸೋರುಣಸೆ ವೆಂಕಟೇಶ್, ರಾಜ್ಯಾದ್ಯಕ್ಷ.