“ಅಂಬೇಡ್ಕರ್ ಸ್ವಗೃಹದ ಮೇಲೆ ದುಷ್ಕರ್ಮಿಗಳ ಅಟ್ಟಹಾಸ..!?.”

76

ಬೆಂಗಳೂರು/ಕೆ.ಆರ್.ಪುರ:ಮುಂಬೈನ ದಾದರ್ ನಲ್ಲಿರುವ ಭಾರತರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಬಿಆರ್.ಅಂಬೇಡ್ಕರ್ ಅವರ ಸ್ವಗೃಹ ರಾಜಗೃಹದ ಮೇಲೆ ದುಷ್ಕರ್ಮಿಗಳು ಆಕ್ರಮಣ ಮಾಡಿ ಸಿಸಿಟಿವಿ,ಕಿಟಕಿ ಗಾಜುಗಳು ಮತ್ತು ಇತರೆ ವಸ್ತುಗಳನ್ನು ದ್ವಂಸ ಮಾಡಿರುವ ಘಟನೆಯನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೋರಹುಣಿಸೆ ವೆಂಕಟೇಶ ಖಂಡಿಸಿದರು. ಅಂಬೇಡ್ಕರ್ ಸ್ವಗೃಹವಾದ ರಾಜಗೃಹದ ಮೇಲೆ ಕಿಡಿಗೇಡಿಗಳಿಂದ ನಡೆದಿರುವ ಘಟನೆ ಯನ್ನು ವಿರೋಧಿಸಿ ಬೆಂಗಳೂರು ಪೂರ್ವ ತಾಲ್ಲೂಕು ಕಛೇರಿ ಮುಂದೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಅವರು ಮಾತನಾಡಿದರು. ಭಾರತ ಸ್ವಾತಂತ್ರ ಪಡೆದನಂತರ ಡಾ.ಬಿಆರ್. ಅಂಬೇಡ್ಕರ್ ರವರು ಈ ದೇಶಕ್ಕೆ ಸಂವಿಧಾನ ವನ್ನು ನೀಡಿ ಈ ದೇಶದ ಪ್ರತಿಯೊಬ್ಬ ನಾಗರೀಕ ನಿಗೂ ಸಮಾನ ಹಕ್ಕನ್ನುನೀಡಿ ಯಾರುಯಾರಿಗೂ ಗುಲಾಮರಲ್ಲ ಎಂದು ಸಾರುವ ಸಂವಿಧಾನ ನೀಡಿರುತ್ತಾರೆ ಎಂದರು. ದೇಶದ ಬಹುಸಂಖ್ಯಾತ ಅಸ್ಪೃಶ್ಯರು, ಧಾರ್ಮಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಎಲ್ಲಾ ರೀತಿಯ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಿ ಮೀಸಲಾತಿ ಕಾನೂನನ್ನು ಅಸ್ತ್ರವ ಮಾಡಿ ಗುಲಾಮಗಿರಿ ಯಿಂದ ಮೇಲೆತ್ತುವ ಮಹತ್ತರ ಕಾರ್ಯ ಅಂಬೇಡ್ಕರ್ ಮಾಡಿದ್ದಾರೆ ಎಂದರು. ಆದರೆ ಮನು ವಾದಿಗಳು ಅವರಿಗೆ ಸಿಕ್ಕ ಅವಕಾಶ ಗಳನ್ನು ಬಳಸಿಕೊಂಡು ಶೂದ್ರರು, ಅಸ್ಪೃಶ್ಯರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಒಂದಲ್ಲ ಒಂದು ರೀತಿ ಮಾನಸಿಕವಾಗಿ,ದೈಹಿಕ ವಾಗಿ ಮತ್ತು ಬೌದ್ಧಿಕವಾಗಿ ಹಲ್ಲೆ ಮಾಡುತ್ತಾ ಬಂದಿದ್ದಾರೆ ಎಂದು ದೂರಿದರು. ಈ ಕೃತ್ಯ ದಿಂದ ನಾಗರೀಕ ಸಮಾಜ ತಲೆ ತಗ್ಗಿ ಸುವಂತಾಗಿದ್ದು ಇದು ಬಾಬಾ ಸಾಹೇಬರಿಗೆ ಮಾಡಿರುವ ಅಪಮಾನವಾಗಿರುತ್ತದೆ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಸತ್ಯವತಿ,ನಗರ ಜಿಲ್ಲಾ ಅದ್ಯಕ್ಷ ದೇವರಾಜ್,ರಾಜ್ಯ ಯುವಘಟಕ ಅಧ್ಯಕ್ಷ ವಿಜಯ್ ಕುಮಾರ್,ನಗರ ಜಿಲ್ಲಾ ಯುವಘಟಕ ಅಧ್ಯಕ್ಷ ಕೇಶವ,ನಗರ ಜಿಲ್ಲಾ ಮಹಿಳಾ ಅದ್ಯಕ್ಷೆ ಮೇಘಳ, ಪಧಾದಿಕಾರಿಗಳಾದ ರೂಪ,ನರಸಿಂಹಯ್ಯ,ಮೈಥಿಲಿ,ಸುಬ್ರಮಣ್ಯ ಸೇರಿ ದಂತೆ ಇತರರು ಹಾಜರಿದ್ದರು.

ಬೈಟ್: ಸೋರುಣಸೆ ವೆಂಕಟೇಶ್, ರಾಜ್ಯಾದ್ಯಕ್ಷ.