ಸವಿತಾ ಸಮಾಜದ ವತಿಯಿಂದ ಸ್ವಯಂ ಪ್ರೇರಿತ ಲಾಕ್ಡೌನ್ ನಿರ್ಧಾರ.

259

ಮಂಡ್ಯ/ಮಳವಳ್ಳಿ: ದೇಶ ವ್ಯಾಪ್ತಿ ಕೋರೋನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿಮಳವಳ್ಳಿ ತಾಲ್ಲೂಕು ಸವಿತ ಸಮಾಜದ ವತಿಯಿಂದ ಪಟ್ಟಣದ ಸಲೂನ್ ಗಳನ್ನು ಸ್ವಯಂ ಪ್ರೇರಿತ ಲಾಕ್ ಡೌನ್ ನಿರ್ಧಾರ ಮಾಡಲಾಯಿತು.

ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಗೆ ಸವಿತಾ ಸಮಾಜ ತಾಲ್ಲೂಕು ಅಧ್ಯಕ್ಷ ರಮೇಶ್ ಹಾಗೂ ಉಪಾಧ್ಯಕ್ಷ ಕುನ್ನಯ್ಯ ನೇತೃತ್ವದಲ್ಲಿ 6 ಕ್ಕೂ ಹೆಚ್ಚು ಪದಾಧಿಕಾರಿಗಳು ತೆರಳಿ ಸ್ವಯಂ ಪ್ರೇರಿತ ಲಾಕ್ ಡೌನ್ ಮಾಡುವ ನಿರ್ದಾರದ ಮನವಿ ಪತ್ರವನ್ನು ತಹಸೀಲ್ದಾರ್ ಚಂದ್ರ ಮೌಳಿ ರವರಿಗೆ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಚಂದ್ರಮೌಳಿ ರವರು ಮಾತನಾಡಿ, ಸ್ವಯಂ ಪ್ರೇರಿತ ಲಾಕ್ ಡೌನ್ ನಿರ್ದಾರ ಮಾಡುತ್ತಿರುವುದು ಸ್ವಾಗತರ್ಹ ಇದರಿಂದ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಿದ್ದಿರಿ , ನಿಮ್ಮಂತಹ ಯೇ ವರ್ತಕರು ಮುಂದಾಗಬೇಕು ಎಂದರು

ಇನ್ನೂ ತಾಲ್ಲೂಕು ಅದ್ಯಕ್ಷ ರಮೇಶ್ ಮಾತನಾಡಿ, ಕೋವಿಡ್ 19 ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸವಿತ ಸಮಾಜವತಿಯಿಂದ ಪಟ್ಟಣದ ಸಲೂನ್ ಗಳನ್ನು ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯ ವರೆಗೆ ಮಾತ್ರ ತೆರೆದು ವಹಿವಾಟು ನಡೆಸ ಲಾಗುವುದು ಉಳಿದ ವೇಳೆ ಲಾಕ್ ಡೌನ್ ಮಾಡ ಲಾಗುವುದು ಎಂದರು.
ಇನ್ನೂ ಉಪಾಧ್ಯಕ್ಷ ಕುನ್ನಯ್ಯ ಮಾತನಾಡಿ, ಕೋರೋನಾ ಹೆಚ್ಚಾಗುತ್ತಿದ್ದು, ಸವಿತ ಸಮಾಜ ಪದಾಧಿಕಾರಿಗಳು ಸೇರಿದಂತೆ ಬೆಳಿಗ್ಗೆ 6 ಗಂಟೆ ಯಿಂದ 12 ಗಂಟೆಯವರೆಗೆ ಸಲೂನ್ ಶಾಪ್ ಗಳನ್ನು ತೆರೆದಿದ್ದು ಆವೇಳೆ ಸಾರ್ವಜನಿಕರು ಆಗಮಿಸಬೇಕು ಉಳಿದ ವೇಳೆ ಲಾಕ್ ಡೌನ್ ಮಾಡಲಾಗುವುದು ಎಂದರು

ಇನ್ನೂ ಈ ವೇಳೆ ರಮೇಶ್ ಉಪಾಧ್ಯಕ್ಷ ಕುನ್ನಯ್ಯ, ಗೌರವಾಧ್ಯಕ್ಷ ಸುಬ್ಬಣ್ಣ, ಹಾಗೂ ಪದಾಧಿಕಾರಿಗಳು

ವರದಿ : ಎ.ಎನ್ ಲೋಕೇಶ್