ತಾಲ್ಲೂಕಿನಾದ್ಯಂತ ವ್ಯಾಪಿಸಿತಾ.. ಕೊರೋನಾ.!?

140

ಮಂಡ್ಯ/ಮಳವಳ್ಳಿ:ಜಿಲ್ಲೆಯಲ್ಲೇ ಮೊದಲಿಗೆ ಬಾರಿಗೆ ತಬ್ಲಿಘು ನಿಂದ ಮಳವಳ್ಳಿ ಪಟ್ಟಣದದಲ್ಲಿ ಕೊರೋನಾ ವೈರಸ್ ಪ್ರಕರಣ ಕಾಣಿಸಿ ಕೊಂಡಿತ್ತು ಇದೀಗ ಮಳವಳ್ಳಿ ತಾಲ್ಲೂಕಿನ ಎಲ್ಲಾ ಹೋಬಳಿ ಗೂ ಅವರಿಸಿದೆ. ಕೊರೋನಾ ಮುಕ್ಕಾಲು ಶತಕ ದಾಟಿದ್ದು ಇಂದು ಕಂಡಕ್ಟೆರ್ ಸೇರಿದಂತೆ ಇಬ್ಬರಿಗೆ ಕೋರೋನಾ ಸೋಂಕು ಕಾಣಿಸಿಕೊಂಡಿದೆ ಮಳವಳ್ಳಿ ಪಟ್ಟಣದ ಸಿದ್ದಾರ್ಥನಗರದ 4 ನೇ ಕ್ರಾಸ್ ವಾಸಿಯಾಗಿರುವ ಕಂಡಕ್ಟರ್ ಕೊಳ್ಳೇಗಾಲ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಈತನಿಗೆ ಕೋವಿಡ್ ಪರೀಕ್ಷೆ ಒಳಪಡಿಸಿದ ನಂತರವೂ ತಿರುಗಾಡುತ್ತಿದ್ದ ಎನ್ನುವ ಮಾತುಗಳು ಕೇಳಿಬಂತು.ಈಗಾಗಲೇ ಆರೋಗ್ಯ ಇಲಾಖೆ ಪ್ರೈಮರಿ ಹಾಗೂ ಸೆಕಂಡರಿ ಕಾಂಟ್ಯಾಕ್ಟ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು ಇನ್ನೂ ಕಿರುಗಾವಲು ಗ್ರಾಮದಲ್ಲೂ ಇಂದು ಓರ್ವ 28 ವ್ಯಕ್ತಿಗೂ ಪಾಸಿಟಿವ್ ಬಂದಿದ್ದು,ಈತ ಡಿಬ್ಯೂಟರ್ ಕಂಪನಿ ಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಈತ ಮೈಸೂರಿಗೆ ಹೋಗಿ ಬರುತ್ತಿದ್ದು ಅಲ್ಲಿಂದ ಬಂದಿರುವ ಶಂಕೆಯನ್ನು ಆರೋಗ್ಯ ಇಲಾಖೆ ವ್ಯಕ್ತಪಡಿಸಿದೆ.ತಾಲ್ಲೂಕಿನಲ್ಲಿ ಮಳವಳ್ಳಿಪಟ್ಟಣ ಸೇರಿದಂತೆ ಇದುವರೆಗೆ 76 ಮಂದಿ ಕೋರೋನಾ ಸೋಂಕು ದೃಡವಾಗಿದ್ದು,ನಿನ್ನೆಯ ವರೆಗೂ 44 ಮಂದಿಗೆ ಗುಣ ಮುಖವಾಗಿದ್ದು ಇನ್ನೂ 32 ಮಂದಿ ಸಕ್ರಿಯ ಪ್ರಕರಣ.

ಒಟ್ಟಿನಲ್ಲಿ ಮಳವಳ್ಳಿ ತಾಲ್ಲೂಕಿನ ಹಲಗೂರು,ಬಿಜಿಪುರ,ಕಸಬಾ,ಕಿರುಗಾವಲು ಹೋಬಳಿಗಳಿಗೂ ಕೋರೋನಾ ಅಟ್ಟಹಾಸ ಮುಂದುವರಿದಿದೆ. ತಾಲ್ಲೂಕು ಆಡಳಿತ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡಬೇಕಾಗಿದೆ.

ವರದಿ:ಎಎನ್. ಲೋಕೇಶ್