ಮನೆಮನೆಗೆ ತೆರಳಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ತಯಾರಿ.

92

ಬೆಂಗಳೂರು/ಮಹದೇವಪುರ:- ಮಹದೇವಪುರ ಬಿಬಿಎಂಪಿ ವಲಯದಲ್ಲಿ ಪ್ರತಿ ಮನೆ ಮನೆಗೆ ತೆರಳಿ ತರ್ಮಾಲ್ ಸ್ರ್ಕೀನಿಂಗ್ ನ ಪರೀಕ್ಷೆ ನಡೆಸುವ ಮೂಲಕ ಕರೋನ ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ನಗರಾಭಿವೃದ್ಧಿ ಸಚಿವ ಹಾಗೂ ವಲಯದ ಕೊರೊನಾ ನಿಯಂತ್ರಣ ಉಸ್ತುವಾರಿ ಬೈರತಿ ಬಸವರಾಜ್ ಅವರು ತಿಳಿಸಿದರು.

ಕ್ಷೇತ್ರದ ಹೂಡಿ ಸಮೀಪದ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಲಯದಲ್ಲಿ ಕರೋನ ಸೋಂಕು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ಜೋತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹದೇವಪುರ ಬಿಬಿಎಂಪಿ ವಲಯದಲ್ಲಿ 375 ಆಂಬ್ಯುಲೆನ್ಸ್ಗಳು ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನದಲ್ಲಿ 400 ಆಂಬ್ಯುಲೆನ್ಸ್ ನಿರ್ವಹಿಸುತ್ತವೆ ಎಂದರು.

ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡುವುದರ ಜೋತೆಗೆ ಕರೋನ ನಿಯಂತ್ರಣ ಘಟಕವನ್ನು ಸ್ಥಾಪಿಸ ಲಾಗುವುದೆಂದು ಹೇಳಿದರು.

ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಲಾಗಿದ್ದು, ಅಗತ್ಯ ಹಾಸಿಗೆ ಸೌಲಭ್ಯಗಳನ್ನು ಪಡೆಯಲಾಗುವುದೆಂದು ತಿಳಿಸಿದರು.

ರೋಗ ಲಕ್ಷಣಗಳು ಕಂಡುಬಂದವರಿಗೆ ಕ್ವಾರಂಟೈನ್ ಮಾಡುವ ಮೂಲಕ ಜಾಗೃತೆ ವಹಿಸುವ ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡಿದರು.

ನಂತರ ಶಾಸಕ ಅರವಿಂದ್ ಲಿಂಬಾವಲಿ ಅವರು ಮಾತನಾಡಿ, ಪ್ರತಿ ನಿತ್ಯ ಕೊವಿಡ್ ವರದಿಗಳ ಬಗ್ಗೆ ತಿಳಿಸಬೇಕು ಆಯಾ ದಿನದ ಹೊಸ ಪ್ರಕರಣಗಳು ಹಾಗೂ ಆಸ್ಪತ್ರೆಯಿಂದ ಬಿಡುಗಡೆಯದವರ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕೆ.ಆರ್.ಪುರ ಹಾಗೂ ಮಹದೇವಪುರ ದಲ್ಲಿ ಯಾವುದೇ ಕೊರೊನ ಪರೀಕ್ಷೆ ಕೇಂದ್ರಗಳು ಸರ್ಕಾರ ವತಿಯಿಂದ ಮಾಡಲಾಗಿಲ್ಲ ಆದ್ದರಿಂದ ಅಧಿಕಾರಿಗಳು ಕೆಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ -೧೯ ಪರೀಕ್ಷೆ ಕೇಂದ್ರ ಮಾಡಬೇಕು ಎಂದರು.

ಸೋಂಕು ಹರಡದಂತೆ ತಡೆಯುವುದು ನಮ್ಮ ಮೊದಲ ಆದ್ಯತೆ ಯಾಗಿದ್ದು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರ ಬಿಬಿಎಂಪಿ ಕಮೀಷನರ್ ಅನೀಲ್ ಕುಮಾರ್, ಜಿಲ್ಲಾಧಿಕಾರಿ ಶ್ರೀನಿವಾಸ್, ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟ ಚಲಪತಿ, ಪಾಲಿಕೆ ಸದಸ್ಯರಾದ ಶ್ವೇತ ವಿಜಯ್ ಕುಮಾರ್, ಶ್ರೀಕಾಂತ್, ಜಯಪ್ರಕಾಶ್ ಸೇರಿದಂತೆ ಹಲವಾರು ಜನ ಪ್ರತಿನಿಧಿಗಳು, ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.