ಡಿಎಸ್ಎಸ್ ವತಿಯಿಂದ ಪ್ರತಿಭಟನೆ ಪೂರ್ವಬಾವಿ‌ ಸಭೆ.

66

ಮಂಡ್ಯ/ಮಳವಳ್ಳಿ: ಅಂಬೇಡ್ಕರ್ ರವರ ನಿವಾಸ ರಾಜಗೃಹ ನಿವಾಸದ ಮೇಲೆ ದಾಳಿ ಖಂಡಿಸಿ , ದುಷ್ಕೃತ್ಯದ ಹಿಂದುಳಿದ ವ್ಯಕ್ತಿ ಶಕ್ತಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಾಗೂ ಸ್ವಾಭಿಮಾನ ಮತ್ತು ಆತ್ಮಗೌರವಕ್ಕಾಗಿ ಮಂಡ್ಯದಲ್ಲಿ ಜು 20 ರಂದು ದಸಂಸ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯುವ ಹಿನ್ನಲೆಯಲ್ಲಿ ಇಂದು ಮಳವಳ್ಳಿ ಪಟ್ಟಣದಲ್ಲಿ ದಲಿತ ಸಂಘಟಗಳು ಪೂರ್ವಭಾವಿ ಸಭೆ ನಡೆಸಲಾಯಿತು.

ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪ್ರೋ.ಚಂದ್ರ ಶೇಖರ್ ಅಧ್ಯಕ್ಷತೆಯಲ್ಲಿ ವಿವಿದ ದಲಿತ ಸಂಘಟನೆಗಳ ಮುಖಂಡರು ಸುಮಾರು 30 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ‌.ಬಿ ಶ್ರೀನಿವಾಸ್ ಮಾತನಾಡಿ, ದಲಿತ ಸಂಘರ್ಷ ಸಮಿತಿ ದಲಿತ ಪರ ಅನ್ಯಾಯ ವನ್ನು ಖಂಡಿಸಿ ಹೋರಾಟ ಮಾಡುತ್ತಾ ಬಂದಿದೆ.
ಡಾ. ಬಿ.ಆರ್ ಅಂಬೇಡ್ಕರ್ ರವರ ನಿವಾಸ ರಾಜಗೃಹ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಕೆಂಪಯ್ಯಸಾಗ್ಯ ಮಾತನಾಡಿ, ದಲಿತ ವಿರುದ್ದ ದೌರ್ಜನ್ಯ ಗಳನ್ನು ಹೆಚ್ಚಾಗುತ್ತಿದೆ, ನಾವೆಲ್ಲರೂ ಒಂದಾಗಬೇಕು, ಅದರಲ್ಲೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಮೇಲೆ ಅಪಪ್ರಚಾರ ರಾಜ್ಯಗೃಹದ ಮೇಲೆ ದಾಳಿ ನಡೆದಿದ್ದು ಹೇಯಕೃತ್ಯ ಇದನ್ನು ದಲಿತಪರ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡೋಣ ಎಂದರು.
ಇನ್ನೂ ವೇಳೆ ಡಾ. ಬಿ.ಆರ್ ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಎಂ.ಆರ್ ಮಹೇಶ್ ಮಾತನಾಡಿ ಹೋರಾಟ ಮಾಡುವಾಗ ಶಿಸ್ತು ಇರಬೇಕು , ನಮ್ಮ ಹೋರಾಟದಿಂದ ಬೇರೆ ಯವರಿಗೆ ಮಾದರಿಯಾಗ ಬೇಕು ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದರು.

ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷ ಮಾಧು, ಡಿಎಸ್ ಎಸ್ ಸಂಚಾಲಕ ಯತೀಸ್, ಜಿಲ್ಲಾ ಸಂಚಾಲಕ ಕೃಷ್ಣ, ದುಗ್ಗನಹಳ್ಳಿನಾಗರಾಜು, ಶಿವಕುಮಾರ್, ರಾಮಯ್ಯ, ಮುದ್ದಯ್ಯ, ಎಸ್.ಎಂ ಕೃಷ್ಣ ಸೇರಿದಂತೆ ಮತ್ತಿತ್ತರರು ಇದ್ದರು

ವರದಿ : ಎ.ಎನ್ ಲೋಕೇಶ್