ರೈತ ಸಂಘ ಹಾಗೂ ಸಿಐಟಿಯು ವತಿಯಿಂದ ಪ್ರತಿಭಟನೆ

324

ಮಂಡ್ಯ/ಮಳವಳ್ಳಿ:ವಿವಿದ ಹಕ್ಕೊತ್ತಾಯಗಳನ್ನು ಪರಿಗಣಿಸಿ ಈಡೇರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ವತಿ ಯಿಂದ. ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭರತ್ ರಾಜ್ ನೇತೃತ್ವದಲ್ಲಿ ಪ್ರಧಾನಿ ಮೋದಿ ವಿರುದ್ದ ಘೋಷಣೆ ಕೂಗಿದರು. ತಾಲ್ಲೂಕು ಅಧ್ಯಕ್ಷ ಭರತ್ ರಾಜ್ ಮಾತನಾಡಿ, ಸರ್ಕಾರ ಜನಗಳ ಜೊತೆನಿಂತು ಜನತೆಯ ಹಾಗೂ ದೇಶದ ಆರ್ಥಿಕ ಸಂಕಷ್ಟ ಹಾಗೂ ಆರೋಗ್ಯ ರಕ್ಷಣೆಗೆ ತೊಡಗಬೇಕಾದನ್ನು ಕಾರ್ಫೋರೇಟ್ ಕಂಪನಿಗಳ ಲೂಟಿಗೆ ದೇಶವನ್ನು ತೆರೆಯುವ ದೇಶ ಹಾಗೂ ಜನವಿರೋಧಿ ನೀತಿಗಳನ್ನು ನಮ್ಮ ಸಂಘ ಖಂಡಿಸುತ್ತದೆ ಎಂದರು. ಕೋವಿಡ್ 19 ‌ಗೆ ವಿಶೇಷ ಪ್ಯಾಕೇಜ್ ಘೋಷಿಸ ಬೇಕು, ಜನದ್ರೋಹಿ ತಿದ್ದುಪಡಿ ಕಾಯ್ದೆಗಳನ್ನು ಸಾರ್ವಜನಿಕ ರಂಗದ ಕೈಗಾರಿಕೆ ಗಳು ಹಾಗೂ ಹಣಕಾಸು ಸಂಸ್ಥೆಗಳ ಖಾಸಗೀಕರಣವನ್ನು ತಡೆಯಬೇಕೆಂದು ಒತ್ತಾಯಿಸಿದರು. ಇನ್ನೂ ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ದೇಶದ ಎಲ್ಲಾ ಕುಟುಂಬಗಳಿಗೆ ಕೋವಿಡ್ 19 ಸಮಸ್ಯೆ ಇತ್ಯರ್ಥವಾಗುವರೆಗೂ ಮಾಸಿಕ 7500 ರೂ ನೆರವು ಘೋಷಿಸಬೇಕು ಸೇರಿದಂತೆ 9 ಮನವಿ ಗಳ ಬೇಡಿಕೆಯನ್ನು ತಹಸೀಲ್ದಾರ್ ಚಂದ್ರಮೌಳಿ ರವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಮುಖಂಡ ರಾಮಕೃಷ್ಣ, ಅಂಗನವಾಡಿ ನೌಕರರ ಸಂಘದ ಲತಾ, ಪ್ರಾಂತ ರೈತ ಸಂಘ ಕಾರ್ಯದರ್ಶಿ ಲಿಂಗ ರಾಜಮೂರ್ತಿ, ಸೇರಿದಂತೆ ಮತ್ತಿತ್ತರರು ಇದ್ದರು ವರದಿ: ಎ.ಎನ್ ಲೋಕೇಶ್