ಮೃತದೇಹ ನೀಡದೆ ಸತಾಯಿಸಿದ ಆಸ್ಪತ್ರೆ ಆಡಳಿತ.!

539
ಬೆಂಗಳೂರು:ಒಂದೇ ಕುಟುಂಬದ ಮೂವರ ಸಾವು,9 ಲಕ್ಷ ಬಿಲ್ ಕಟ್ಟದೆ ಮೃತದೇಹ ಕೊಡುವುದಿಲ್ಲ ಎಂದ ಆಸ್ಪತ್ರೆ ಸಿಬ್ಬಂದಿಗಳು.ಮೃತ ಕುಟುಂಬಸ್ಥರಿಗೆ ಸಚಿವ ಬೈರತಿ ಸಹಾಯ. ಉಸಿರಾಟದ ತೊಂದರೆಯಿಂದ ಮೃತಪಟ್ಟ ಮಹಿಳೆಯ ಮೃತದೇಹ ನೀಡಲು 9 ಲಕ್ಷ ಬಿಲ್ ಪಾವತಿಸುವಂತೆ ಹೇಳಿರುವ ಘಟನೆ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅಫ್ರೋಜ್​.ಬಿ ಎಂಬುವವರನ್ನು ಜುಲೈ 13 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕೆಂದಿದ್ದರು. ಈ ಸುದ್ದಿ ಕೇಳಿದಾಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಬಂದಿದ್ದ ಆಕೆಯಪತಿ ಹೃದಯಾಘಾತ ದಿಂದ ಸಾವನ್ನಪ್ಪಿದ್ದಾರೆ. ತಂದೆಯ ಅಂತ್ಯಕ್ರಿಯೆ ಮುಗಿಸಿಬಂದ ಪುತ್ರನಿಗೂ ಹೃದಯಾಘಾತ ವಾಗಿದ್ದು,ಎರಡು ದಿನದ ಬಳಿಕ ಆತನೂ ಸಾವನ್ನಪ್ಪಿದ್ದಾನೆ.ಇತ್ತ ಆಸ್ಪತ್ರೆಯಲ್ಲಿದ್ದ ಮಹಿಳೆ ಕೊರೋನ ಸೋಂಕಿನಿಂದ ಉಸಿರಾಟ ಸಮಸ್ಯೆ ಉಂಟಾಗಿ ಮೃತರಾಗಿದ್ದು,ಆಸ್ಪತ್ರೆಯವರು ಮೃತ ದೇಹ ನೀಡಲು 9 ಲಕ್ಷ ಪಾವತಿ ಮಾಡುವಂತೆ ಹೇಳಿದ್ದಾರೆ. ಆಸ್ಪತ್ರೆಯಿಂದ ಮೃತದೇಹ ಕೊಡಬೇಕಾದ್ರೆ ಬಿಲ್​ ಪಾವತಿಗೆ ಒತ್ತಡ ಹಾಕಿದ್ದಾರೆ.BBMP ಅಧಿಕಾರಿ ಹೇಳಿದ್ರು…ಮೃತದೇಹ ಕೊಡದೆ ಹಣಕ್ಕಾಗಿ ಪೀಡಿಸಿದ್ದಾರೆ. ಮೃತದೇಹಕ್ಕಾಗಿ ಆಸ್ಪತ್ರೆ ಮುಂದೆ ನಿನ್ನೆಯಿಂದ ಕಾಯುತ್ತಿರುವ ಕುಟುಂಬದವರಿಗೆ ಕೊನೆಗೆ ಸಚಿವ ಬೈರತಿ ಬಸವರಾಜ್ ಖಾಸಗಿ ಆಸ್ಪತ್ರೆ ಭೇಟಿ ನೀಡಿದಾಗ ಮೃತರ ಕುಟುಂಬದವರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ನಂತರ ಸಚಿವರು ಶವವನ್ನು ನೀಡುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಿದ ನಂತರ ಶವವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. ಮೃತ ಕುಟುಂಬದ ಸಂಬಂಧಿ ಸುಲ್ತಾನ್ ಮಿರ್ಜಾ ಅವರು ಮಾತನಾಡಿ, ಕೊರೋನ ಸೋಂಕಿನಿಂದ ಮೃತ ಪಟ್ಟ ಅಪ್ರೋಜ್ ಅವರ ಶವವನ್ನು ನೀಡಲು 9 ಲಕ್ಷ ಬಿಲ್ ಪಾವತಿ ಮಾಡುವವರೆಗೆ ಕೊಡುವುದಿಲ್ಲ ಎಂದು ಕಳೆದ 28 ಗಂಟೆ ಕಾಲ ಶವವನ್ನು ನೀಡದೇ ಹಣಕ್ಕಾಗಿ ಪೀಡಿಸಿದ್ದಾರೆ. ಕೊನೆಗೆ ಸಚಿವ ಬೈರತಿ ಬಸವರಾಜ್ ಅವರ ಗಮನಕ್ಕೆ ತಂದಾಗ ಆಸ್ಪತ್ರೆ ಅಧಿಕಾರಿಗಳಿಗೆ ಹೇಳಿ ಯಾವುದೇ ಬಿಲ್ ಪಾವತಿ ಮಾಡಿಸಿ ಕೊಳ್ಳದೆ ಶವವನ್ನು ನೀಡಿದ್ದಾರೆ‌.ಬೈರತಿ ಬಸವ ರಾಜ್ ಅವರ ಸಹಾಯಕ್ಕೆ ಮೃತ ಕುಟುಂಬ ಕೃತಜ್ಞತೆ ಸಲ್ಲಿಸಿದರು.

SHOW LESS