ಎಂಎಲ್ಎ / ಎಂಎಲ್ಸಿ ಮಾತಿನ ಜಟಾಪಟಿ…!?

259
ಬೆಂಗಳೂರು ಗ್ರಾಮಾಂತರ/ ಹೊಸಕೋಟೆ: ಶರತ್ ಬಚ್ಚೇಗೌಡ ಹೇಳಿಕೆಗೆ ತಿರುಗೇಟು ನೀಡಿದ ಎಂಎಲ್ಸಿ,ಎಂಟಿಬಿ ನಾಗರಾಜ್. ಬಚ್ಚೇಗೌಡ ಕುಟುಂಬದವರು ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಬರುತ್ತಿದ್ದಾರೆ. ಶರತ್ ಬಚ್ಚೇಗೌಡ ಕೇವಲ 8 ತಿಂಗಳ ಎಂಎಲ್ಎ, ನಾನು ನಾಲ್ಕುದಶಕಗಳ ರಾಜಕಾರಣದಲ್ಲಿ ನಾಲ್ಕು ಭಾರಿ ಎಂಎಲ್ಎ ಆಗಿ ಒಂದು ಭಾರಿ ಸಚಿವ ನಾಗಿದ್ದೇನೆ. ಬಚ್ಚೇಗೌಡ ಕುಟುಂಬ  ದವರಿಗಿಂತ ನಾನು ಹತ್ತು ಪಟ್ಟು ಶ್ರೀಮಂತ,ನನಗೆ ರಾಜಕೀಯದಿಂದ ಹಣ ಮಾಡುವ ಆಸೆ ಇಲ್ಲ ಎಂದರು.ತಮ್ಮ ಪ್ರಭಾವ ಬಳಸಿ ಸ್ಮಶಾನದ ಜಾಗವನ್ನು ಅಕ್ರಮವಾಗಿ ಶರತ್ ತಮ್ಮಹೆಸರಿಗೆ ಖಾತೆ ಮಾಡಿಸಿ ಕೊಂಡಿದ್ದಾರೆ.ತಾಕತ್ತಿದ್ದರೆ ನನ್ನೆದುರು ಬರಲಿ ದಾಖಲೆ ಸಮೇತ ಮಾದ್ಯಮಗಳ ಮುಂದೆ ಬರುತ್ತೇನೆಂದು, ಶರತ್ ಬಚ್ಚೇಗೌಡಗೆ ಸವಾಲ್ ಹಾಕಿದ ಎಂಟಿಬಿ ನಾಗರಾಜ್. ಸುಳ್ಳು,ಮೋಸದಿಂದ ರಾಜಕೀಯ ಮಾಡಿಕೊಂಡು ಜೆಡಿಎಸ್,ಬಿಜೆಪಿ,ಪಕ್ಷೇತರರಾಗಿ ಇದೀಗ ಕಾಂಗ್ರೆಸ್ ಮನೆಯ ಬಾಗಿಲು ತಟ್ಟಿದ್ದಾರೆ ಎಂದರು ಇವರು ಸ್ವಾರ್ಥಿಗಳಾ, ನಿಸ್ವಾರ್ಥಿಗಳಾ? ಎಂಬುದು ಜನರೇ ತೀರ್ಮಾನ ಮಾಡುತ್ತಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡರ ಏಟಿಗೆ ತಿರುಗೇಟು ನೀಡಿದ ಎಂಟಿಬಿ.

SHOW LESS