ನೇಕಾರರ ಹಿತರಕ್ಷಣಾ ಸಮಿತಿಯ ವತಿಯಿಂದ ಪ್ರತಿಭಟನೆಗೆ ಸಿದ್ಧತೆ.!?

917
ದೊಡ್ಡಬಳ್ಳಾಪುರ: ನಗರದ ಕನ್ನಡ ಜಾಗೃತ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯ ವತಿಯಿಂದ ಪತ್ರಿಕಾ ಗೋಷ್ಟಿ ನಡೆಸಲಾಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪಿ.ಎ.ವೆಂಕಟೇಶ್ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಯ್ಕೆ ಕಸುಬಿನ ಆಧಾರವಾಗಿಸಿಕೊಂಡು ಜೀವನ ಕಟ್ಟಿಕೊಂಡಿವೆ,ಅದರಲ್ಲಿ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರವೂ ನೇಗಾರಿಕೆಗೆ ಕೆಲವಯ ದಶಕಗಳ ಇತಿಹಾಸ ಹೊಂದಿದೆ.ಸಾಂಪ್ರದಾಯಿಕ ಹಬ್ಬಹರಿದಿನಗಳಿಗೆ ಮತ್ತು ಮದುವೆ ಶುಭ ಸಮಾರಂಭಗಳಿಗೆ ಅವಶ್ಯಕತೆಯ ಬಳಸುವ ಬಟ್ಟೆ ತಯಾರಿಸುವುದೇ ಪ್ರಮುಖವಾಗಿದೆ. ನೇಕಾರಿಕೆಯನ್ನು ನಂಬಿ ಬದುಕುವ ಬಡ ಕೂಲಿ ಕಾರ್ಮಿಕರೇ ಹೆಚ್ಚಿರುವ ನಗರದಲ್ಲಿ ಇವರು ನೇಯ್ದ ಬಟ್ಟೆಯನ್ನು ಮಧ್ಯವರ್ತಿ ವ್ಯಾಪಾರಿ ಗಳಿಗೆ ಮಾರಾಟ ಮಾಡುವುದ ರೊಂದಿಗೆ ಬಂದ ಹಣದಲ್ಲಿ ಜೀವನ ನಡೆಸುವ ಮತ್ತು‌ ನೇಯ್ಗೆ ಯನ್ನೇ ನಂಬಿ‌ ಬದುಕುತ್ತಿರುವ ಕಾರ್ಮಿಕರು ಕೋವಿಡ್ ಮಹಾಮಾರಿಯಿಂದ ಸರ್ಕಾರಗಳು ವಿಧಿಸಿದ ಲಾಕಡೌನ್ ನಿಂದ ಕೆಲಸ ವಿಲ್ಲದೆ ಸಂಪಾದನೆ ಕಳೆದುಕೊಂಡು ಮನೆಮಂದಿ‌ ಎಲ್ಲಾ ಉಪವಾಸ ಬೀಳುವಂತಾಗಿದೆ. ನೆಪಮಾತ್ರಕ್ಕೆ ಸರ್ಕಾರ ‌ನೀಡಿದ ಆಶ್ವಾಸನೆ ಪರಿಹಾರ ಹಣದ ನಿರೀಕ್ಷೆಯಲ್ಲಿರುವ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕ ವಾಗಿದೆ.ಸಂಪಾದನೆ ಇಲ್ಲದ,ಸಾಲದ ಭಾದೆ ತಾಳಲಾರದೆ ರಾಜ್ಯಾದ್ಯಂತ ಈಗಾಗಲೇ ಹನ್ನೊಂದು ಜನ ಕಾರ್ಮಿಕರು ಆತ್ಮ ಹತ್ಯಗೆ ಶರಣಾಗಿದ್ದಾರೆ. ಮನುಕುಲದ ಮಾನ ಮುಚ್ಚುವ ನೇಯ್ಗೆ ಕಾರ್ಮಿರ ಪ್ರಾಣಾಪಾಯದಲ್ಲಿ ಇರುವುದು ಅರಿತ ಸರ್ಕಾರವೂ ಜಾಣಕುರುಡು ಪ್ರದರ್ಶಿ ಸುತ್ತಿರುವುದು ಖಂಡನೀಯ, ಪರಿಹಾರ ಘೋಷಣೆ ಮಾಡಿ ಎರಡು ತಿಂಗಳಾದರು ಹಣ ಕಾರ್ಮಿಕರ ಕೈ ಸೇರದೇ ಇರುವುದು ನಮ್ಮ ದೌರ್ಭಾಗ್ಯ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸರ್ಕಾರ ದಿಂದ ಹದಿಮೂರು ಬೇಡಿಕೆಗಳ ಒತ್ತಾಯವನ್ನು ಈಡೇರಿಸುವಂತೆ ಇದೇ ತಿಂಗಳು ದಿನಾಂಕ 17 ರಂದು ರಾಜ್ಯಾದ್ಯಂತ ಪ್ರತೀ ತಾಲೂಕಿನ ತಹಶಿಲ್ದಾರರ ಕಚೇರಿಗಳ ಮುಂದೆ ಕರ್ನಾಟಕ ರಾಜ್ಯ ನೇಕಾರ ಸಂಘಗಳ ಒಕ್ಕೂಟ ದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

SHOW LESS