ವೈದ್ಯರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಸಚಿವರು.

320

ಬೆಂಗಳೂರು/ಮಹದೇವಪುರ:ಕೋವಿಡ್ 19 ಸೊಂಕು ತಡೆ ಹಿನ್ನೆಲೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಅವರು ಪ್ರಗತಿ ಪರಿಶೀಲನ ಸಭೆ ನಡೆಸಿ ವೈದ್ಯರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೂಡಿ ಸಮೀಪದ ಖಾಸಗಿ ಹೋಟೆಲ್ ನಲ್ಲಿ ಮಹದೇವಪುರ ಬಿಬಿಎಂಪಿ ವಲಯ ಉಸ್ತುವಾರಿ ಬಿ.ಎ ಬಸವರಾಜ್ ರವರ ನೇತೃತ್ವದಲ್ಲಿ ಕೊರೋನಾ ಸೋಂಕು ತಡೆ ಸಂಬಂಧ ಅಧಿಕಾರಿ ಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಶನಿವಾರ 6ನೇ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಬಸವರಾಜ್ ರವರು, ಕೋವಿಡ್ 19 ಡ್ಯೂಟಿಯಲ್ಲಿ ಯಾವುದೇ ಅಧಿಕಾರಿಗಳು ಅಥವಾ ವೈದ್ಯರಾಗಲಿ ನಿರ್ಲಕ್ಷ ತೋರಿದರೂ ಕೂಡಲೆ ಅಮಾನತ್ತು ಗೊಳಿಸು ವಂತೆ ಸೂಚನೆ ನೀಡಿದರು.

ಸೂಕ್ತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಮುಂದಿನ ಸಭೆಯಲ್ಲಿ ಸೋಂಕು ಪ್ರಮಾಣ ಕಡಿಮೆ ಮಾಡಲೇ ಬೇಕೆಂದು ಸೂಚನೆ ನೀಡಿದರು.

ಕೊರೋನಾ ಸೊಂಕಿತರಾಗಲಿ,ಪ್ರೈಮರಿ ಕಾಂಟೆಕ್ಟ್ ಗಳಾಗಲಿ ರಸ್ತೆಗಿಳಿದರೆ ಅವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

ಕೋವಿಡ್-19 ನಿರ್ವಹಣೆಯಲ್ಲಿ ಕಳಪೆ‌ ಪ್ರದರ್ಶನೆ ಮಾಡಿದ ಅಧಿಕಾರಿಗಳನ್ನು ಕೂಡಲೆ ಅಮಾನತ್ತು ಮಾಡುವಂತೆ ಹಿರಿಯ ಅಧಿಕಾರಿ ಗಳಿಗೆ ಸೂಚನೆ‌ ನೀಡಿದರು.

ವಾರ್ಡ್ ಒಂದರಲ್ಲಿ ಪ್ರತಿ ದಿನ ಕನಿಷ್ಟ ಪಕ್ಷ 150 ಸ್ವಾಬ್ ಟೆಸ್ಟ್ ಮಾಡಲೇ ಬೇಕೆಂದು ಆದೇಶ ಮಾಡಿದರು.

ದೊಡ್ಡನಕ್ಕುಂದಿ,ರಾಮಮೂರ್ತಿ ನಗರ, ಬೆಳ್ಳಂ ದೂರು, ಸೇರಿದಂತೆ ಹಲವೆಡೆ ವೈದ್ಯರು ಸ್ಥಳೀಯ ಪಾಲಿಕೆ ಸದಸ್ಯರೊಂದಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಸಚಿವ ರೊಂದಿಗೆ ತಮ್ಮ ಅಳಲು ತೋಡಿಕೊಂಡರು.

ಪಾಲಿಕೆ ಸದಸ್ಯರ ಅಳಲಿಗೆ ಸ್ಪಂದಿಸಿದ ಸಚಿವ ಬಸವರಾಜ್ ಅಂತಹ ಅಧಿಕಾರಿಗಳ ವಿರುದ್ದ ಕೂಡಲೆ ಕ್ರಮಕ್ಕೆ ಸೂಚಿಸಿದರು.

ಮಾರತ್ ಹಳ್ಳಿ ವಾರ್ಡ್ ಪಾಲಿಕೆ ಸದಸ್ಯ ರಮೇಶ್ ಮಾತನಾಡಿ ನಮ್ಮ ವಾರ್ಡ್ ನಲ್ಲಿ ಅತಿ ಹೆಚ್ಚು ಬಡವರಿದ್ದು,ಸರ್ಕಾರ ದಿಂದ ಸಿಗುತ್ತಿರುವ ಪಡಿತರ ದಾನ್ಯ ಸಾಕಾಗುತ್ತಿಲ್ಲ ಹಾಗಾಗಿ ಇನ್ನು ಹೆಚ್ಚು ಪಡಿತರ ವಿತರಣೆ ಮಾಡುವಂತೆ ಮನವಿ ಮಾಡಿದರು.

ಬೆಳ್ಳಂದೂರು ಮತ್ತು ಹೊರಮಾವು ವಾರ್ಡ್ ನಲ್ಲಿ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ ಕೂಡಲೆ ಕಡಿಮೆ ಆಗಲು ಶ್ರಮಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಐಎಎಸ್ ಅಧಿಕಾರಿ ಡಾ.ಮಂಜುಳಾ, ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್,ಡಿಸಿಪಿ ದೇವರಾಜ್,ಜಂಟಿ ಆಯುಕ್ತ ವೆಂಕಟಾ ಚಲಪತಿ, ತಹಶೀಲ್ದಾರ್ ತೇಜಸ್ ಕುಮಾರ್ ಸೇರಿದಂತೆ ಹಲವು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.