ಪ್ರೌಢಶಾಲೆ ನಿರ್ಮಿಸಿಕೊಡಿ

273

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕುಕಡೊಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ಇಲ್ಲದೇ ಇರುವುದು ವಿದ್ಯಾರ್ಥಿಗಳಿಗೆ ಜಲ್ವಂತ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕುಕಡೊಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆ ಮುಗಿಸಿದರೇ ಸಾಕು ಪ್ರೌಢ ಶಾಲೆಯ ಕಲಿಕೆಗಾಗಿ ದೂರದ 5 ಕಿಲೋಮೀಟರ್ ದೂರದಲ್ಲಿರುವ ಗಜಪತಿ ಪ್ರೌಢ ಶಾಲೆ ಹಾಗೂ ಪಕ್ಕದ ಖಾನಾಪುರ ತಾಲ್ಲೂಕಿನ 4 ಕಿಲೋಮೀಟರ್ ದೂರದಲ್ಲಿರುವ ಜಿಕನೂರು ಗ್ರಾಮದ ಪ್ರೌಢಶಾಲೆಗೆ ದಿನ ನಿತ್ಯ ಚಳಿ, ಗಾಳಿ ಎನ್ನದೇ ನಡೆದುಕೊಂಡೇ ಇಲ್ಲಿನ ಸಾಕಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಸಂಚಾರ ಮಾಡುತ್ತಾರೆ. ಜೊತೆಗೆ ಇಷ್ಟು ದೂರ ಇರುವುದನ್ನು ನೋಡಿ ಹಲವಾರು ಜನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನೇ ಮೊಟಕು ಗೊಳಿಸಿದ್ದಾರೆ. ಈ ಬಗ್ಗೆ ಇಲ್ಲಿನ ಗ್ರಾಮಸ್ಥರು ಪದೇ ಪದೇ ಜನಪ್ರತಿನಿಧಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದ್ದರಿಂದ ಇಂದು ಪತ್ರಕರ್ತ ಬಸವರಾಜು ಭೇಟಿ ಕೊಟ್ಟು ಇಲ್ಲಿನ ಸಮಸ್ಯೆಯ ಬಗ್ಗೆ ವರದಿ ತಯಾರಿಸಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರ ಗಮನಕ್ಕೆ ತೆಗೆದುಕೊಂಡು ಬಂದಿತು. ಆದ್ದರಿಂದ ಇನ್ನಾದರೂ ಕುಕಡೊಳ್ಳಿ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡುವವರೇ ಎಂಬುದನ್ನು ಕಾಡುನೋಡಬೇಕಿದೆ. ವರದಿ:ಬಸವರಾಜು.. ವೀರಾಪುರ.