ಪ್ರತಿಭಟನೆ ನಿರತರ ಮೇಲೆ ದೌರ್ಜನ್ಯ ಖಂಡಿಸಿ ಪತ್ರಿಕಾಗೋಷ್ಠಿ..!?

63
ದೊಡ್ಡಬಳ್ಳಾಪುರ: ಬೆಳಗಾವಿಯ ಪಿರಣವಾಡಿ ಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸ್ಥಾಪಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿರುವ ಕನ್ನಡಿಗರ ಮೇಲೆ ದೌರ್ಜನ್ಯ ಎಸಗಿರುವ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕುರುಬರ ಸಂಘ ನಿರ್ದೇಶಕ ಕಂಟನಕುಂಟೆ ಕೃಷ್ಣಮೂರ್ತಿ ವಾಗ್ದಾಳಿ ನಡೆಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹಿಂದೆ ಇದ್ದ ಸರ್ಕಾರವೇ ಪ್ರತಿಮೆ ಸ್ಥಾಪನೆ ಮಾಡಲು ಅನುಮತಿ ನೀಡಲಾಗಿತ್ತು ಆದರೆ ಪ್ರತಿಮೆಯನ್ನು ಏಕಾಏಕಿ ಸ್ಥಾಪಿಸಲಾಗಿದೆ. ಎಂದು ಆರೋಪಿಸಿ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ ಇದರಿಂದ ಓರ್ವ ಸ್ವಾತಂತ್ರ್ಯ ಸೇನಾನಿಗೆ ಸರ್ಕಾರ ಮಾಡಿದ ಘೋರ ಅವಮಾನವಾಗಿದೆ‌ ಎಂದರು. ಕನ್ನಡ ಪಕ್ಷದ ಸಂಜೀವ್ ನಾಯಕ್ ಮಾತನಾಡಿ ಸ್ವಾತಂತ್ರ ಹೋರಾಟಗಾರರಾದ ರಾಯಣ್ಣ ನವರ ಪ್ರತಿಮೆಯನ್ನು ನಮ್ಮ ಬೆಳಗಾವಿಯ ಕನ್ನಡ ನೆಲ ದಲ್ಲಿ ಪ್ರತಿಮೆ ಸ್ಥಾಪಿಸಿದ್ದೇವೆ ಅದನ್ನು ತೆರವು ಮಾಡಿರುವುದು ಎಷ್ಟು ಮಾತ್ರ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ನೆಲದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಯನ್ನು ಯಾವುದೇ ಕಾರಣಕ್ಕೂ ತೆರವು ಮಾಡ ಬಾರದು ಆ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತ ಎಂದೇ ನಾಮಕರಣ ಮಾಡಬೇಕು ಹಾಗೂ ಪ್ರತಿಮೆ ಸ್ಥಾಪಿಸಿದ್ದ ಆ ಭಾಗದ ಕನ್ನಡಿಗರ ಮೇಲೆ ಹಾಕಿರುವ ಕ್ರಿಮಿನಲ್ ಕೇಸುಗಳನ್ನು ವಾಪಸ್ ಪಡೆಯ ಬೇಕು ಎಂದು ಆಗ್ರಹಿಸಿದರು.

SHOW LESS