ಅಕ್ರಮ ಶ್ರೀಗಂಧ,ಗಾಂಜಾ ಮಾರಾಟದ ಮನೆ ಮೇಲೆ ಪೊಲೀಸರು ದಾಳಿ, ಮೂವರ ಬಂಧನ.!?

163

ಚಿಕ್ಕಬಳ್ಳಾಪುರ/ಚಿಂತಾಮಣಿ : ಅಕ್ರಮವಾಗಿ ಮನೆಯಲ್ಲಿ ಶ್ರೀಗಂಧ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ನಗರಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಆನಂದ ಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ನಾರಾಯಣ ಸ್ವಾಮಿ ನೇತೃತ್ವದಲ್ಲಿ ದಾಳಿನಡೆಸಿ 43 ಕೆಜಿ ಶ್ರೀಗಂಧದ ತುಂಡುಗಳು ಮತ್ತು 3ಕೆಜಿ 800 ಗ್ರಾಮ ಗಾಂಜಾ ಸಮೇತ ಮೂರು ಆರೋಪಿ ಗಳನ್ನು ತಂದೆ, ತಾಯಿ ಮತ್ತು ಮಗ ನನ್ನು ಬಂಧಿಸಿರುವ ಘಟನೆ ಚಿಂತಾಮಣಿ ನಗರದ ಕೀರ್ತಿ ನಗರದಲ್ಲಿ ನಡೆದಿದೆ . ಇವರಿಗೆ ಇದೇನು ಹೊಸದಲ್ಲ ಸುಮಾರು ಮೂರು ನಾಲ್ಕು ಬಾರಿ ಇದೇರೀತಿ ಅಕ್ರಮ ಚಟು ವಟಿಕೆ ಗಳಲ್ಲಿ ಭಾಗಿಯಾಗಿದ್ದು,ಇವರ ಮೇಲೆ ಮೂರ್ನಾಲ್ಕು ಇಂತಹ ಚಟುವಟಿಕೆಗಳಿಗೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದರೆ. ಪದೇ ಪದೇ ಇದೇ ರೀತಿಯಲ್ಲಿ ಅಕ್ರಮ ಚಟು ವಟಿಕೆ ಯಲ್ಲಿ ಭಾಗಿಯಾಗಿರುವ ಇವರ ಹಿಂದೆ ಯಾರ ಕೈವಾಡ ಇದೆ ಎನ್ನುವುದು ಇನ್ನೂ ನಿಖರ ಮಾಹಿತಿಗೆ ಪೊಲೀಸರು ಕಳೆಹಾಕಿದ್ದಾರೆ. ಬಂದಿದ್ದ ಆರೋಪಿಯಾದ ವಜೀರ್ ಖಾನ್, ಹೆಂಡತಿ ಶಬಾನ ಮತ್ತು ಮಗ ಅರ್ಬಾಸ್ ಎಂಬ ಮೂವರನ್ನು ಬಂಧಿಸಲಾಗಿದೆ . ದಾಳಿಯಲ್ಲಿ ನಗರ ಠಾಣೆ ಪೊಲೀಸ್ ಸಿಬ್ಬಂದಿ, ಪ್ರಿಬೆಷನರಿ ಸಬ್ಇನ್ಸ್ಪೆಕ್ಟರ್ ಸತೀಶ್,ಸರ್ವೇಶ್ ಸೋಮಶೇಖರ್,ವೇಣು,ವಿಶ್ವನಾಥ್ ,ರವೀಂದ್ರ, ಮಂಜುನಾಗಭೂಷಣ್ ,ಮೊಹಸೀನ, ದೇವಿಕಾ ರವರು ಗಾಂಜಾ ಮತ್ತು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.