ಅಕ್ರಮ ಗಾಂಜಾ ಮಾರಾಟಗಾರರ ಬಂಧನ.

137

ಚಿಕ್ಕಬಳ್ಳಾಪುರ/ಚಿಂತಾಮಣಿ :-ನಗರ ಠಾಣೆ ಪೊಲೀಸರು ಇಲ್ಲಿನ ಕೀರ್ತಿನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಮಾರಾಟಕ್ಕಾಗಿ ದಾಸ್ತಾನು ಮಾಡಿದ್ದ 3.8 ಕೆ.ಜಿ ಗಾಂಜಾ, 43 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿ ಐವರನ್ನು  29 ಅಗಸ್ಟ್ ಬುಧವಾರ ರಂದು  ಬಂದಿದ್ದರು.

ನಿನ್ನೆ ಸಂಜೆ ನಗರದ ರಾಮಕುಂಟೆ ರಸ್ತೆಯ ಪಕ್ಕದಲ್ಲಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ  ನಗರ ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆಸಿದ ನಗರ ಪೊಲೀಸ್ ಪಿ.ಐ ಜೆ.ಎನ್   ಆನಂದ್ ಕುಮಾರ್ ಸಬ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ,ಪ್ರೊಬೆಷನರಿ ಪಿ.ಎಸ್.ಐ ಸತೀಶ್ ಹಾಗೂ ಸಿಬ್ಬಂದಿಯವರಾದ ವಿಶ್ವನಾಥ್, ನಾಗ್ಭೂಷಣ್, ಚಂದ್ರಕುಮಾರ್, ಸುನೀತಾ,  ರವೀಂದ್ರ, ಸರ್ವೇಶ್ ದಾಳಿ ನಡೆಸಿ ಆಂಧ್ರಪ್ರದೇಶದ ಗುಂಟಪಲ್ಲಿ ಗ್ರಾಮದ ,ಟಿ ಸದುಂ ಮಂಡಲಂ ತಂಬಾಳ್ಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ ,ಸ್ವಂತ ಸ್ಥಳ ಇಂದ್ರಮ್ಮ ಕಾಲೋನಿಯ  ಬಿ ಕೊತ್ತುಕೋಟ ಟೌನ್  ಶಂಕರ್ ಬಿನ್ ವೆಂಕಟರವಣಪ್ಪ (33) ವರ್ಷ ಮತ್ತು  ರೇಷ್ಮೆ ಕೆಲಸ ಮಾಡುತ್ತಿದ ಶಿಡ್ಲಘಟ್ಟ ನಗರದ ನಿವಾಸಿಯಾದ ಶಾಬಾಜ್ ಬಿನ್ ಹಯಾತ್ ಪಾಷ (26) ವರ್ಷದ ಅವರು ಇಬ್ಬರು AP 29 AH 9210 ಇಂಡಿಗೊ ಕಾರುನಲ್ಲಿ ಇಟ್ಟಿದ ಮೂರು ಬ್ಯಾಗ್ ಸಮೇತ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷ ಣಾಧಿಕಾರಿಗಳಾದ ಮಿಥುನ್ ಕುಮಾರ್ ಅವರು ಇಂದು ನಗರ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರಿನ ಹಿಂಭಾಗದ ಸೀಟ್ ನಲ್ಲಿ  ಮೂರು ಬ್ಯಾಗ್ ಗಳಲ್ಲಿ  ಇದ್ದು ಆಂಧ್ರ ಮತ್ತು ಶಿಡ್ಲಘಟ್ಟ ಮೂಲದ ಇಬ್ಬರು ವ್ಯಕ್ತಿಗಳು ಸಾಗಿಸಿದ್ದನ್ನು ಕಂಡು ಪೊಲೀಸರು ಕಾರ್ಯಾಚರಣೆ ನಡೆಸಿ 32 ಕೆ ಜಿ ಯಷ್ಟು ಸುಮಾರು ಹತ್ತು ಲಕ್ಷ ಮೌಲ್ಯದ ಗಾಂಜಾ ಮತ್ತು ಮೂರು ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈ ಇಬ್ಬರು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಇವರು ಗಾಂಜಾ ಮಾರುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು ಎಂದು ತಿಳಿಸಿದರು.