ಕೋವಿಡ್ ಶವ ಸಂಸ್ಕಾರಕ್ಕೆ ಮುಂದಾದ ಮಾದರಿ ಸಂಘಟನೆ.

93
ಚಿಕ್ಕಬಳ್ಳಾಪುರ/ ಚಿಂತಾಮಣಿ: ನಗರದ ವಾರ್ಡ್ ನಂಬರ್ 29 ರ ಸುಮಾರು 45 ವರ್ಷ ಮಹಿಳೆ ಕೋವಿಡ್ ಕಾಯಿಲೆಯಿಂದ ಮೃತಪಟ್ಟಿರುತ್ತಾರೆ. ಸದರಿ ಮಹಿಳೆಯನ್ನು ಚಿಂತಾಮಣಿ ನಗರದ “Populer front of India” ಸಂಘಟನೆಯಿಂದ ಸರ್ಕಾರಿ ನಿಯಮಗಳನ್ನು ಒಳಗೊಂಡಂತೆ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಖಾಬರಸ್ಥಾನ ನಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಆನ್ಸರ್ ಮತ್ತು ಮನ್ಸೂರ್ ರವರು ಸಾಧಿಕ್ ಮುನೀರ್ ಸುಲ್ತಾನ್ ವಸೀಂ ಮುಂಸಿಫ್ ಉಪಸ್ಥಿತರಿದ್ದರು ಸದರಿ ಸಂಘಟನೆಯವರು ಕೊವಿಡ್ ನಿಂದ ಯಾವುದೇ ಸಮಾಜದವರು ಮೃತಪಟ್ಟರು ಅವರ ಸಂಪ್ರದಾಯದಂತೆ ನಾವು ಸಂಸ್ಕಾರ ಮಾಡಲು ತಯಾರಿದ್ದೇವೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಮನವಿ ಮಾಡಿರುತ್ತಾರೆ.