ವೀಕೆಂಡ್ ಕರ್ಪ್ಯೂ ಉಲ್ಲಂಘನೆ, ಖಾಕಿ ಕೈಯಿಂದ ಲಾಠಿ ರುಚಿ.!?

151
ಚಿಕ್ಕಬಳ್ಳಾಪುರ/ಚಿಂತಾಮಣಿ:ಕೋವಿಡ್ ನಿಯಮ ಉಲ್ಲಂಘಸಿ ರೋಡಿಗೆ ಬಂದರೆ ಬೀಳುತ್ತೆ ಬಿಸಿಬಿಸಿ ಕಜ್ಜಾಯ,ರಾಜ್ಯಾದ್ಯಂತ ವೀಕೆಂಡ್ ಕರ್ಪ್ಯೂ ಹಿನ್ನೆಲೆ ಮತ್ತೆ ಲಾಠಿರುಚಿ ತೋರಿಸಿದ ಚಿಂತಾಮಣಿ ಪೊಲೀಸರು,ಸುಖಾ ಸುಮ್ಮನೆ ರಸ್ತೆಯಲ್ಲಿ ತಿರುಗಾಡುವ ವಾಹನ ಸವಾರರಿಗೆ ಲಾಠಿ ರುಚಿ.ಚಿಂತಾಮಣಿ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಗಸ್ತು ತಿರುಗವ ವೇಳೆ ಲಾಠಿ ಏಟು . ಡಿವೈಎಸ್ಪಿ ಲಕ್ಷ್ಮಯ್ಯ ಮತ್ತು ಇನ್ಸ್ಪೆಕ್ಟರ್ ಆನಂದ್ ಕುಮಾರ್ ರಿಂದ ಲಾಠಿರುಚಿ.ಫೀಲ್ಡಿ ಗಿಳಿದ ಡಿ ವೈ ಎಸ್ ಪಿ ಹಾಗೂ ತಹಸಿಲ್ದಾರ್ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರರಿಗೆ ಲಾಠಿ ರುಚಿ ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮ ವಾರ ಬೆಳಗ್ಗೆ 6 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇಂದು ಬೆಳಿಗ್ಗೆ 11 ಗಂಟೆ ಸಮಯದಲ್ಲಿ  ಡಿ ವೈ ಎಸ್ ಪಿ ಲಕ್ಷ್ಮಯ್ಯ ತಾಲ್ಲೂಕು ದಂಡಾಧಿಕಾರಿ ಡಿ.ಹನುಮಂತರಾಯಪ್ಪ ನಗರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಆನಂದಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಕೈಯಲ್ಲಿ ಲಾಠಿ ಹಿಡಿದು ಫೀಲ್ಡಿಗ್ ಇಳಿದರು. ಅನಾವಶ್ಯಕವಾಗಿ ಓಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸ್ ಭಾಷೆಯಲ್ಲಿ ಬುದ್ಧಿ ಕಲಿಸಿದರು. ನಗರದ ಗಜಾನನ ವೃತ್ತ ಹಾಗೂ ಬೇರೆ ವೃತ್ತಗಳಲ್ಲಿ ಕೆಲವರು ಕದ್ದುಮುಚ್ಚಿ ಅಂಗಡಿ ಗಳನ್ನು ತೆರೆದಿದ್ದು ಪೋಲಿಸರಿಗೆ ನೋಡಿದ ತಕ್ಷಣ ಬಾಗಿಲುಗಳನ್ನು ಹಾಕಿ ಓಡುತ್ತಿದ್ದ ದೃಶ್ಯಗಳು ಕಂಡುಬಂದವು. ರಸ್ತೆಗಳಲ್ಲಿ ಚಲಿಸುತ್ತಿದ್ದ ವಾಹನಗಳನ್ನು ಪೊಲೀಸರು ಪರಿಶೀಲನೆ ಮಾಡಿ ಕಳುಹಿಸಿ ಕೊಡುತ್ತಿದ್ದ ದೃಶ್ಯಗಳು ಕೂಡ ಕಾಣಿಸಿಕೊಂಡವು.