ಸಚಿವರೊಂದಿಗೆ ಶಾಸಕರ ವಿಡಿಯೋ ಸಂವಾದ

42
ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ:ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು, ಇಂದು ಜಿಲ್ಲಾ ಉಸ್ತುವಾರಿ ಸಚಿವರು ಆರ್.ಅಶೋಕ್ ಮತ್ತು ಶಾಸಕರುಗಳು ಹಾಗೂ ಅಧಿಕಾರಿಗಳಿಗೆ ವಿಡಿಯೋ ಸಂವಾದದ ಮೂಲಕ ಆಯೋಜಿ ಸಲಾದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು ಟಿ.ವೆಂಕಟ ರಮಣಯ್ಯ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು.
ವಿಷಯ ಒಂದು: ಕ್ಷೇತ್ರದ ಆಸ್ವತ್ರೆಯಲ್ಲಿ ಪ್ರತಿ ದಿನ ಹತ್ತಾರು ಆಂಬ್ಯುಲೆನ್ಸ್ ಗಳು ಸರಥಿ ಸಾಲಿ ನಲ್ಲಿ ನಿಂತಿದ್ದು, ಸಕಾ೯ರವು ಬೆಂಗಳೂರು ಅರ್ಬನ್ ತಾಲ್ಲೂಕಿನ ಸೋಂಕಿತರಿಗೆ 75% ಬೆಡ್ ಗಳು,ಗ್ರಾಮಾಂತರ ಭಾಗದ ಸೋಂಕಿತರಿಗೆ 25% ಬೆಡ್ ಗಳು ನೀಡುತ್ತಿರುವುದು ಖಂಡನೀಯ.ಮೊದಲು ಬಂದವರಿಗೆ ಆದ್ಯತೆ ನೀಡಿ,ಅದರಲ್ಲೂ ಗ್ರಾಮಾಂತರ ಪ್ರದೇಶದ ಸೋಂಕಿತರಿಗೆ ಬೆಡ್ ಗಳನ್ನು ಹೆಚ್ಚಾಗಿ ನೀಡ ಬೇಕು ಎಂದು ಒತ್ತಾಯಿಸಿದರು.
ವಿಷಯ ಎರಡು: ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಂದ ಪ್ರತಿಯೊಂದು ಗ್ರಾಮಗಳಲ್ಲೂ ಸಹಾ ಫೀವರ್ ಕ್ಲೀನಿಕ್ ಕ್ಯಾಂಪ್ ಮಾಡಬೇಕು ಹಾಗೂ ಹೋಮ್ ಕೋರೆಂಟೈನ್ ನಲ್ಲಿರುವಂತಹ ಸೋಂಕಿತರಿಗೆ ಸರಿಯಾದ ಮೆಡಿಕಲ್ ಕಿಟ್ನೀಡ ಬೇಕು ಎಂದು ಮನವಿ‌ ಮಾಡಿದ್ದಾರೆ. ವಿಷಯ ಮೂರು:ಸಕಾ೯ರ ದಿಂದ ರಾಜ್ಯದ ಬಡವರಿಗೆ,ಲಾಕ್ ಡೌನ್ ಸಂದಭ೯ದಲ್ಲಿ ಅನುಕೂಲವಾಗುವ ರೀತಿಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ರೇಷನ್ ಕಿಟ್ ಅಥವಾ ಸಹಾಯ ಧನ ನೀಡಬೇಕಾಗಿ ಮನವಿ ಮನವಿ ಮಾಡಿದ್ದಾರೆ.