ನಕಲಿ ವೈದ್ಯರ ಕ್ಲೀನಿಕ್‌ಗೆ ಅಧಿಕಾರಿಗಳ ದಾಳಿ

61

ಚಿಕ್ಕಬಳ್ಳಾಪುರ/ ಚಿಂತಾಮಣಿ:ನಗರದ ಬುಕ್ಕನಹಳ್ಳಿ ರಸ್ತೆಯಲ್ಲಿರುವ ಮೆಡಿಕಲ್ ಸ್ಟೋರ್‌ನಲ್ಲಿ ಆರ್.ಎಂ.ಪಿ.ವೈದ್ಯ ಅನಧಿಕೃತ ವಾಗಿ ರೋಗಿಗಳಿಗೆ ತಪಾಸಣೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಹನುಮಂತರಾಯಪ್ಪ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಸ್ವಾತಿ ದಾಳಿ ನಡೆಸಿ ಶೋಕಾಸ್ ನೋಟೀಸ್ ನೀಡಿದರು. ಇತ್ತೀಚೆಗೆ ಕರೋನಾ ಸೋಂಕಿನ ವ್ಯಕ್ತಿ ಒಬ್ಬರು ನಕಲಿ ವೈದ್ಯರಿಂದ ತಪಾಸಣೆ ನಡೆಸಿಕೊಂಡು ನಂತರ ಮೃತಿ ಹೊಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದು, ಈ ನಕಲಿ ವೈದ್ಯ ಸರ್ಕಾರದಲ್ಲಿ ನೋಂದಣಿ ಪಡೆದಿಲ್ಲ ಹಾಗು ಯಾವುದೇ ಅಧಿಕೃತ ಪ್ರಮಾಣ ಪತ್ರಗಳನ್ನು ಹೊಂದಿಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಸ್ವಾತಿ ತಿಳಿಸಿದರು . ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಪ್ರಸಾದ್ , ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ ಇದ್ದರು ,