ಅನವಶ್ಯಕವಾಗಿ ಬೀದಿಗಿಳಿದವರಿಗೆ ಲಾಠಿ ಬಿಸಿ ಮುಟ್ಟಿಸಿದ ಪೊಲೀಸರು

26

ರಸ್ತೆಗಿಳಿದ ವಾಹನ‌ ಸವಾರರಿಗೆ ಬಿಟ್ಟು ಲಾಠಿ ಏಟು. ಚಿಕ್ಕಬಳ್ಳಾಪುರ/ ಚಿಂತಾಮಣಿ:ಕೊರೊನಾ ಸೋಂಕು ಹರಡುವುದನ್ನು ತಡೆಯಳೆಂದು ರಾಜ್ಯ ಸರ್ಕಾರ ಜಾರಿ‌ಮಾಡಿದ್ದ ಎರಡನೆ‌ಲಾಕ್ ಡೌನ್‌ ಇಂದಿನಿಂದ ಪ್ರಾರಂಭವಾಗಿದ್ದು ಅನವಶ್ಯ ಕ ವಾಗಿ ರಸ್ತೆಗಿಳಿದ ದ್ವಿಚಕ್ರವಾಹನ ಗಳನ್ನು ಪೋಲಿಸರು ಮುಟ್ಟುಗೋಲ್ ಹಾಕಿ ಕೊಂಡು ಘಟನೆಗಳು ಹಾಗೂ ಲಾಠಿ‌ಏಟು ಕೊಟ್ಟ ಪ್ರಸಂಗಗಳು ಸರ್ವೆ ಸಮಾನ್ಯವಾಗಿತ್ತು.          ಇನ್ನು ತರಕಾರಿ ಮತ್ತು ದಿನ‌ನಿತ್ಯದ ಸರಕು ಸೇವೆಗಳನ್ನು ಕೊಂಡುಕೊಳ್ಳಲು ಯಾವುದೆ ವಾಹನದಲ್ಲಿ ಸಂಚರಿಸದೆ ಕಾಲು‌ನಡಿಗೆಯಲ್ಲಿ‌ ಬಂದವರಿಗೆ ಮಾತ್ರ ಅವಕಾಶ ನೀಡಿ ವಾಹನ ಸಂಚಾರವನ್ನು ತಡೆದರೆ. ಈ ವೇಳೆ ಡಿವೈಎಸ್ಪಿ ಲಕ್ಷ್ಮಯ್ಯ,ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಆನಂದ್,ಸಬ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ‌ಸೇರಿದಂತೆ ಇತರೆ‌ಸಿಬ್ಬಂದಿ‌ ಬೆಳ್ಳಂ ಬೆಳ್ಳಗೆ ರಸ್ತೆ ಇಳಿದು ಕಾರ್ಯಾಚರಣೆ ನಡೆಸಿದರು. ಇದೆ ವೇಳೆ 60 ಕ್ಕೂ ಹೆಚ್ಚು ದ್ವಿಚಕ್ರವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಎಸ್ಪಿ‌ ಭೇಟಿ:ಇನ್ನೂ ತಾಲೂಕಿಗೆ ಭೆಟ್ಟಿ ಕೊಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಅವರು ರಸ್ತೆಗಿಳಿದು ವಾಹನಗಳನದನು ಜಪ್ತಿ ಮಾಡಿದರು. ಈ ವೇಳೆ‌ಮಾತನಾಡಿದ ಅವರು ಶಿಡ್ಲಘಟದಲ್ಲಿ ಈಗಾಲ್ಲೆ‌ ಐವತ್ತಕ್ಕೂ ಹೆಚ್ಚು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು,ಚಿಂತಾಮಣಿಯಲ್ಲೂ ಅನಾವಶ್ಯಕವಾಗಿ ಸಂಚರಿಸುತ್ತಿರುವ ವಾಹನಗಳನ್ನು‌ ಜಪ್ತಿ‌ಮಾಡಲಾಗುತ್ತಿದೆ ಎಂದರು.