ವಾಹನ ಸವಾರರಿಗೆ ಕಪಾಲಮೋಕ್ಷ ಮಾಡಿದ ಪೋಲಿಸ್.!

13
ಚಿಕ್ಕಬಳ್ಳಾಪುರ/ಚಿಂತಾಮಣಿ:ಎರಡನೇ ದಿನದ ಲಾಕ್ ಡೌನ್ ಹಿನ್ನೆಲೆ ಬೆಳಂ ಬೆಳ್ಳಗ್ಗೆ ಪೋಲಿಸರ ಕಾರ್ಯಾಚರಣೆ ಚುರುಕುಗೊಂಡಿದ್ದು, ವಾಹನ‌ ಸವಾರನೊಬ್ಬರಿಗೆ ಕಪಾಲ ಮೋಕ್ಷ ಮಾಡಿದರೆ ಮತ್ತೊಂದು ಕಡೆ ರಸಗೊಬ್ಬರಕ್ಕೆ ಬಂದಿದ್ದ ರೈತನ ಬೈಕ್‌ ಜಪ್ತಿ ಮಾಡಿದ್ದರಿಂದ ರೈತರು ಪರದಾಡಿದ ಪ್ರಸಂಗಳು ನಡೆದವು. ರಸಗೊಬ್ಬರ ಖರೀದಿಸಲಿ ಬಂದಿದ್ದ ರೈತರ ಬೈಕ್ ಜಪ್ತಿ ರೈತರ ಪರದಾಟ. ಜನ‌ ಸಂಚಾರ ನಿಯಂತ್ರಣಕ್ಕೆ ಪಣತೊಟ್ಟ ಪೋಲಿಸರು ಬೆಳ್ಳಂಬೆಳಗ್ಗೆ ನಗರದ ಬೆಂಗಳೂರು ರಸ್ತೆ ಕನ್ನಂಪಲ್ಲಿ ಬಳಿಯ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರತ ವಾಗಿದ್ದ ಪೋಲಿಸರು ಬೆಂಗಳೂರು‌ ಮಾರ್ಗವಾಗಿ ಬಂದ‌ ಬೈಕ್‌ ಸವಾರ ನೋರ್ವನ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ ಈ ವೇಳೆ ಬೈಕ್‌‌ ಕೀ ಕಿತ್ತು ಕೊಂಡದಕ್ಕೆ ಬಂದ‌ಪೋಲಿಸಪ್ಪಗೆ ಅಡ್ಡಿಮಾಡಿದ ಸವಾರನಿಗೆ ಪೋಲಿಸಫ್ಪ ಕಪಾಲ‌ಮೊಕ್ಷ‌ ಮಾಡಿದ್ದಾನೆ. ಪಾಲೆಪಲ್ಲಿ ಗ್ರಾಮದಿಂದ ರಸಗೊಬ್ಬರ ರೆಂದು ನಗರಕ್ಕೆ ಬಂದಿದ್ದ ರೈತನೊರ್ವನ ಬೈಕ್‌ನ್ನು ನಗರದ ಚೇಳೂರು ವೃತ್ತದಲ್ಲಿ ಜಪ್ತಿ ಮಾಡಿದ‌ ಪರಿಣಾಮ ರಸಗೊಬ್ಬ ಕೊಂಡೊಯ್ಯಲು ರೈತ ಪರದಾಡಿದ್ದಾನೆ ಅಷ್ಟೆ ಅಲ್ಲದೆ ರೈತರಿಗೆ ಬೇಕಾದ‌ ಕೃಷಿ ಸಾಮಗ್ರಿಗಳನ್ನು ನಾವು ತೆಗೆದು ಕೊಳ್ಳುವುದು ಹೇಗೆ ಎಂದು ಪೊಲೀಸ್ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.

SHOW LESS