ಅಬಕಾರಿ ಇಲಾಖೆ ಕೃಪಾಕಟಾಕ್ಷ, ಕಾಳಸಂತೆಯಲ್ಲಿ ಮದ್ಯಮಾರಾಟ.!?

71
ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ:ರಾಜ್ಯಾದ್ಯಂತ ಕೋವಿಡ್ ಲಾಕ್ಡೌನ್ ನಿಯಮ ಪಾಲಿಸುತ್ತಾ ಅಗತ್ಯವಸ್ತುಗಳ ಮಾರಾಟಕಷ್ಟೇ ಬೆಳಗ್ಗೆ ನಿಗಧಿತ ಸಮಯದಲ್ಲಿ ಮಾತ್ರ ಅವಕಾಶ ಮಾಡಿಕೊಟ್ಟು ಇನ್ನುಳಿದ ಎಲ್ಲಾವ್ಯಾಪಾರ ವಹಿವಾಟುಗಳಿಗೆ ನಿರ್ಭಂದ ವಿಧಿಸಿದೆ. ಕೊರೋನಾ ಸೋಂಕು ತಡೆಗಟ್ಟಲು ತರಕಾರಿ ಮಾರುಕಟ್ಟೆ,ಹೋಟಲ್,ಪಬ್,ಕ್ಲಬ್,ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೂ ಕಠಿಣ ನಿಯಮ ಗಳನ್ನು ಒಳಗೊಂಡ ಆದೇಶ ಹೊರಡಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಮಾರ್ಗಸೂಚಿ ತಲುಪಿಸಿದೆ.ಆದರೂ ನಮ್ಮೂರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೋ,ಇಲ್ಲಾ ಅವರ ಕೃಪಾಕಟಾಕ್ಷವೋ ನಗರದ ಬಹುತೇಕ ಕಡೆ ನೆಪಮಾತ್ರಕ್ಕೆ ಬಾರು,ರೆಸ್ಟೋರೆಂಟ್,ವೈನ್ ಸ್ಟೋರು ಗಳು ಮುಂದಿನ ಬಾಗಿಲು ಮುಚ್ಚಿ ಹಿಂಬಾಗಿಲಿ ನಿಂದ ಮದ್ಯಮಾರಾಟ ಮಾಡುತಿದ್ದಾರೆ,ಕೊರೋನಾ ಲಾಕ್ ಡೌನ್ ಹೆಸರು ಹೇಳಿ ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮದ್ಯಮಾರಾಟದಲ್ಲಿ ತೊಡಗಿದ್ದಾರೆ.ನಗರದ ಜೆಪಿ.ವೈಭವ್ ಎಂಬ ಸಿಎಲ್ 7 ಬಾರ್ ನಲ್ಲಿ ನೆಪಮಾತ್ರಕ್ಕೆ ಮುಂದಿನ ಗೇಟ್ ಹಾಕಿ ಕೊಂಡು ಕುಡುಕರಿಗೆ ಎಣ್ಣೆ ಜೊತೆಗೆ ಕುಡಿಯುವ ನೀರು,ನಂಜಿಕೊಳ್ಳಲು ಉಪ್ಪಿನಕಾಯಿ ಸಮೇತ ಮಾರಾಟ ಮಾಡುತಿದ್ದಾರೆ ಎಂದರೆ ದೃಶ್ಯದಲ್ಲಿ ನೋಡಿದ ನೀವು,ನಂಬಲೇ ಬೇಕು.
ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಈ ಬಾರ್ ಇರುವುದು ಗ್ರಾಮಾಂತರ ಪೊಲೀಸ್ ಠಾಣೆ ಕಾಂಪೌಂಡ್ ಪಕ್ಕದಲ್ಲೇ.ಅಲ್ಲಾರೀ ನಮ್ಮ ಅಧಿಕಾರಿಗಳು ಬಡಬಗ್ಗರು ಮಾತ್ರೆ ಟಾನಿಕ್ ತರುವುದಕ್ಕೋ ಕುಡಿಯೋನೀರು ತರೋದಿಕ್ಕೋ ರಸ್ತೆಗೆಹೋದರೆ ಕುಂಡಿಮೇಲೆ ಬಾಸುಂಡೆ ಬರೋ ಹಾಗೆ ಹೊಡಿತಾರಂತೆ..!?ಸರ್ಕಾರದ ಆದೇಶಗಾಳಿಗೆ ತೂರಿ ಕಾಳಸಂತೆಯಲ್ಲಿ ಅಕ್ರಮಮದ್ಯಮಾರಾಟ ಮಾಡೋ ಈ ಅಯೋಗ್ಯ ರನ್ನು ದಂಡಿಸಲಾಗದಷ್ಟು ಅಸಹಾಕ ರಾಗಿದ್ದಾರಾ ನಮ್ಮ ಅಧಿಕಾರಿಗಳು ಎನ್ನುವ ಪ್ರಶ್ನೆ ನಮ್ಮನಿಮ್ಮಲ್ಲಿ ಉದ್ಭವಿಸುತ್ತೆ.

SHOW LESS