ನಿರಾಶ್ರಿತರಿಗೆ ಉಚಿತ ತರಕಾರಿ ದಿನಸಿಸಾಮಗ್ರಿ ವಿತರಣೆ

175

ಚಿಕ್ಕಬಳ್ಳಾಪುರ/ ಚಿಂತಾಮಣಿ :-ಲಿಯೋ ಕ್ಲಬ್ ಆಫ್ ಮಾರ್ಗ್ , ಅನಿತಾ ಚಾರಿಟೆಬಲ್ ಟ್ರಸ್ಟ್ ಮತ್ತು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ನಿರ್ಗತಿಕರಿಗೆ,ಬಿಪಿಎಲ್ ಕಾರ್ಡ್ ಇಲ್ಲ ದವರಿಗೆ,ಕೂಲಿಕಾರ್ಮಿಕರಿಗೆ,ನಿರಾಶ್ರಿತರಿಗೆ ತರಕಾರಿ,ದಿನಸಿ,ಜ್ಯೂಸ್ ಪಾಕೆಟ್ ವಿತರಣೆ ನಗರದ ಪಾಲಿಟೆಕ್ನಿಕ್ ಆವರಣದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥನ್ ಕುಮಾರ್ ರವರ ಸಮ್ಮುಖದಲ್ಲಿ ವಿತರಿಸಲಾಯಿತು.ನಂತರ ಮಾತನಾಡಿದ ಮಿಥನ್ ಕುಮಾರ್ಇಂ,150 ಜನರಿಗೆ ತರಕಾರಿ,ದಿನಸಿ,ಜ್ಯೂಸ್ ಪಾಕೆಟ್ ವಿತರಣೆಮಾಡಿದ್ದು ಇಂತಹ ಸಂದಿಗ್ಧ ಸಮಯದಲ್ಲಿ ಸ್ವಯಂಸೇವಾ ಸಂಸ್ಥೆಗಳು ಅನನ್ಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ವೆಂದರು.ಇದರ ಜೊತೆಗೆ ಕೋವಿಜ್ -19 ಸೋಂಕಿಗೆ ಒಳಗಾಗಿ ಹೋಂ ಐಸೋಲೇಷನ್‌ ನಲ್ಲಿದ್ದು ದಿನಸಿ ಪದಾರ್ಥಗಳ ಅಗತ್ಯವಿದಲ್ಲಿ ಉಚಿತವಾಗಿ ಮನೆಮನೆಗೆ ಸಾಮಗ್ರಿಗಳನ್ನು ಕಳುಹಿಸಿಕೊಡ ಲಾಗುತ್ತಿ ರುವುದು ಕೂಡ ಸಮಯೋಚಿತವೆಂದರು . ಇಂತಹ ಉನ್ನತ ಮಟ್ಟದ ಸೇವೆ ಸಲ್ಲಿಸುತ್ತಿರುವ ವರಿಗೆ ಇನ್ನಷ್ಟು ಶಕ್ತಿ ಬರಲಿ ಎಂದು ಆಶಿಸಿದರು . ತಹಸೀಲ್ದಾರ್ ಹನುಮಂತರಾಯಪ್ಪ ಮಾತನಡಿ ಕೋವೀಡ್ ವ್ಯಾಕ್ಸಿನ್ ಈಗಾಗಲೇ ತಾಲೂಕಿನ ವ್ಯಾಕ್ಸಿನ್ ಕೇಂದ್ರಗಳಲ್ಲಿ ನೀಡುತ್ತಿದ್ದು ತಪ್ಪದೇ ಲಸಿಕೆಗಳನ್ನು ಹಾಕಿಸಿ ಕೊಳ್ಳಿ ಎಂದರು.ಲಿಯೋ ಕ್ಲಬ್ ಆಫ್ ಮಾರ್ಗ್ ಸೇವಾಮನೋಭಾವನೆ ತಾಲೂಕಿನಲ್ಲಿ ಉತಮ ಸೇವೆ ಸಲ್ಲಿಸಿ ಮಾನ ವೀಯತೆ ಮೆರೆದಿದ್ದಾರೆ ಎಂದರು.ಸಂಘದ ಅಧ್ಯಕ್ಷ ನವೀನ್ ಜಿ ಕೃಷ್ಣ ಮಾತನಾಡಿ ಪಡಿತರಚೀಟಿ ಇಲ್ಲದಿರುವಂತಹ ಕುಟುಂಬಗಳನ್ನು ಪ್ರತಿ ವಾರ್ಡಿನಲ್ಲಿ ಗುರುತಿಸಿ ಅಂತಹ ವರಿಗೆ ದಿನಸಿ ಸಾಮಾಗ್ರಿ ವಿತರಿಸುತ್ತಿದ್ದು ಸಂಘವು ಅನೇಕ ಸಂದರ್ಭಗಳಲ್ಲಿ ಸಮಾಜಕ್ಕೆಅವಶ್ಯವಿದ್ದಾಗ ಸಂಘವು ಸೇವೆಸಲ್ಲಿಸುತ್ತಿದ್ದು ಮುಂದೆ ಇದೇರೀತಿ ಸಮಾಜಕ್ಕೆ ತಮ್ಮ ಕಡೆಯಿಂದ ಎಷ್ಟುಸಾಧ್ಯವೋ ಅಷ್ಟು ಸೇವೆಗೈಯುವೆವು ಎಂದರು.ಈ ಸಂದರ್ಭದಲ್ಲಿ ನಗರಠಾಣೆ ಇನ್ಸ್ಪೆಕ್ಟರ್ ಆನಂದ್ ಕುಮಾರ್,ಗಾಮಾಂತರ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸಪ್ಪ,ಕಂದಾಯ ಇಲಾಖೆ ಶಿರಸ್ತೇದಾರ್ ಗೋಪಾಲಕೃಷ್ಣ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.