ದುಷ್ಟರ ವಿರುದ್ಧ ದಿಕ್ಕಾರ ಕೂಗಲೂ ಸೈ, ದುರ್ಬಲರ ಸೇವೆಗೂ ಸೈ.!

1

ದೊಡ್ಡಬಳ್ಳಾಪುರ: ಕೋವಿಡ್19 ಹಿನ್ನೆಲೆಯಲ್ಲಿ ಸೋಂಕು ತಪಾಸಣೆಗಾಗಿ ತಾಲೂಕಿನ ವಿವಿಧ ಕಡೆಗಳಿಂದ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಹೊರರೋಗಿಗಳಿಗಾಗಿ ಆಸ್ಪತ್ರೆ ಮುಂಭಾಗದಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿ ಯಿಂದ ಬಿಸಿನೀರು, ಕಷಾಯ,ಹಾಲು,ಹಣ್ಣು ಮತ್ತು ಮೊಟ್ಟೆಯನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ನೇತೃತ್ವದಲ್ಲಿ ಹಮ್ಮಿ ಕೊಳ್ಳಲಾಗಿದೆ. ಸತತ ನಾಲ್ಕು ದಿನಗಳಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಸಂಘಟನೆಯ ಕಾರ್ಯ ಕರ್ತರು ಮತ್ತು ಸ್ವಯಂಸೇವಕರು ಹಾಲು,ಹಣ್ಣು ಹಂಚುವುದರೊಂದಿಗೆ ಆಸ್ಪತ್ರೆಗೆ ಬರುವ ರೋಗಿ ಗಳಿಗೆ ಕೋವಿಡ್ ನಿಯಮಗಳನ್ನು ಪಾಲಿಸು ವಂತೆ ಮತ್ತು ಸಾಮಾಜಿಕ ಅಂತರವನ್ನುಕಾಯ್ದು ಕೊಳ್ಳುವಂತೆ ಜಾಗೃತಿಯನ್ನು ಮೂಡಿಸುತಿದ್ದಾರೆ. ಜೊತೆಗೆ ಮಾಸ್ಕ್ ವಿತರಿಸುತ್ತಾ ಅಸಹಾಯಕರಿಗೆ ನಿಮ್ಮ ಜೊತೆ ನಾವಿದ್ದೇವೆ ಯಾವುದೇ ರೀತಿಯ ವೈಧ್ಯಕೀಯ ಸಹಾಯ,ಸಹಕಾರ ಬೇಕಿದ್ದಲ್ಲಿ ಸಂಪರ್ಕಿಸಿ ಎಂದು ಮಾನಸಿಕ ದೈರ್ಯ ತುಂಬುತ್ತಾ ಸೇವಾಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಇವರ ತಂಡಕ್ಕೆ ಹಲವರು ಕೃತಜ್ಞತೆ ತಿಳಿಸುತಿದ್ದು, ಸಾಮಾಜಿಕ ಕಾಳಜಿಯ ಇವರ ಸೇವೆ ಇತರೆ ಸಂಘಟನೆ ಗಳಿಗೆ ಮಾದರಿ ಯಾಗಲಿ ಎಂದು ಹಾರೈಸುತಿದ್ದಾರೆ..