ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ.

1

ದೊಡ್ಡಬಳ್ಳಾಪುರ: ಕೋವಿಡ್ ಪ್ರಂಟ್ ಲೈನ್ ವಾರಿಯರ್ಸ್‌ ಕೊರೋನಾ ಸೋಂಕಿತರಿಗಾಗಿ ನಗರ ಹೊರವಲಯದ ಕೊಡಿಗೆಹಳ್ಳಿ ಸಮೀಪದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯವನ್ನು ಕೋವಿಡ್ ಕೇರ್ ಸೆಂಟರನ್ನು ಕ್ಷೇತ್ರದ ಶಾಸಕ ಟಿ.ವೆಂಕಟ ರಮಣಯ್ಯ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿವೈಎಸ್ಪಿ ಡಿ.ರಂಗಪ್ಪ ಮಾತನಾಡುತ್ತಾ  ಕರ್ತವ್ಯ ನಿರತ ವಿವಿಧ ಇಲಾಖೆಗಳ ಸರ್ಕಾರಿನೌಕರರು ಮತ್ತು ವೈದ್ಯಕೀಯ ಸಿಬ್ಬಂದಿ,ಪೌರಕಾರ್ಮಿಕರು, ಪೊಲೀಸರು ಸೇರಿದಂತೆ ಪತ್ರಕರ್ತರುನ್ನು ಒಳ ಗೊಂಡ ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಗಾಗಿ ಸುಸಜ್ಜಿತವಾದ 50 ಹಾಸಿಗೆಗಳ ಹಾಸ್ಟಲ್ ಅನ್ನು ಸರ್ಕಾರದ ಮಾರ್ಗ ಸೂಚಿಯಂತೆ ತಾಲೂಕು ಆಡಳಿತದ ವತಿಯಿಂದ ತಾತ್ಕಾಲಿಕ ಕೋವಿಡ್ ಸೆಂಟರ್ ತೆರೆದಿದ್ದೇವೆ  ಎಂದರು. ಸೇವಾ ಕ್ಷೇತ್ರದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಕೊರೋನಾ ಮಹಮ್ಮಾರಿಯನ್ನು ಓಡಿಸಲು ಹಗಲಿರುಳು ಶ್ರಮಿಸುತ್ತಿರುವ ವಾರಿಯರ್ಸ್‌ ಆರೋಗ್ಯವನ್ನು ಕಾಪಾಡುವ ಮತ್ತು ಅವರಿಗೆ  ಆರ್ಥಿಕಹೊರೆಯನ್ನು ತಪ್ಪಿಸಲು ಮತ್ತು ಅವರುಗಳ ಆರೋಗ್ಯರಕ್ಷಣೆ ಯೊಂದಿಗೆ    ನೀವು ಒಬ್ಬಂಟಿಗರಲ್ಲಾ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮಸ್ಥೈರ ತುಂಬುವ ನಿಟ್ಟಿನಲ್ಲಿ ಇಲ್ಲಿ ಅವರಿಗೆ ಅವಶ್ಯಕವಿರುವ ಊಟ,ತಿಂಡಿ,ಬೆಡ್, ಔಷದೋಪಚಾರ, ಆಕ್ಸಿಜೆಂನ್ ಸೇರಿದಂತೆ ಎಲ್ಲ ಅನುಕೂಲ ಗಳನ್ನು ಸಿದ್ಧಪಡಿಸಿದ್ದೇವೆ ಎಂದರು. ಕಾರ್ಯಕ್ರಮ ದಲ್ಲಿ ಉಪವಿಭಾಗಾಧಿಕಾರಿ ಅರುಳ್ ಕುಮಾರ್,ತಹಶಿಲ್ದಾರ್ ಟಿಎಸ್, ಶಿವರಾಜ್,ಟಿಹೆಚ್ಒ.ಪರಮೇಶ್ವರ್,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಅನಿತಾ ದೇವಿ,ಸಮಾಜ ಕಲ್ಯಾಣ ಇಲಾಖೆ ಸೋಮ ಶೇಖರ್,ಸರ್ಕಲ್ ಇನ್ಸ್ಪೆಕ್ಟರ್, ನವೀನ್ ಕುಮಾರ್,ಸತೀಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ರಾಜಶೇಖರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.