ನಗರದಲ್ಲಿ ಹಲವು ಕಡೆ ಸೀಲ್ ಡೌನ್…!

1

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಹಲವು ಕಡೆ ಸೀಲ್ ಡೌನ್ ಮಾಡಲು ತಾಲ್ಲೂಕು ಆಡಳಿತ ಮತ್ತು ನಗರಾಡಳಿತ ನಿರ್ಧಾರ ಮಾಡಲಾಗಿದೆ ಎಂದು ತಹಶಿಲ್ದಾರ್ ಟಿಎಸ್.ಶಿವ ರಾಜ್ ತಿಳಿಸಿದ್ದಾರೆ. ಈಗಾಗಲೇ ನಗರದ ಹೊರ ವಲಯದ ಪಾಲನ ಜೋಗಹಳ್ಳಿ ಯ ಪ್ಲಾನ್ಟೇಷನ್ ಸೀಲ್ ಡೌನ್ ಅವಧಿಯನ್ನು ಇನ್ನೂ ನಾಲ್ಕುದಿನಕ್ಕೆ ಮುಂದು ವರೆಸಿದ್ದು, ಭುವನೇಶ್ವರಿ ನಗರವನ್ನು ಇಂದಿ ನಿಂದ ಬರುವ ಸೋಮವಾರದವರಗೆ ಕಟ್ಟು ನಿಟ್ಟಿನ ನಿಯಮ ಗಳೊಂದಿಗೆ ಸೀಲ್ಡೌನ್ ಮಾಡಲಾಗಿದೆ.ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಅನವಶ್ಯಕವಾಗಿ ತಿರುಗಾಡುವುದು, ಅಂಗಡಿ ಬಾಗಿಲುತೆಗೆದು ವ್ಯಾಪರ ವಹಿವಾಟು ಮಾಡಲು ಮುಂದಾದಲ್ಲಿ ಅಂತಹವರ ವಿರುದ್ದ ದೂರು ದಾಖಲಿಸಿ,ಯಾವುದೇ ಮುಲಾಜಿಲ್ಲದೆ ಅಂಗಡಿ ಗಳನ್ನು ಸೀಜ್ ಮಾಡಿ ಕೊರೋನಾ ಲಾಕ್ ಡೌನ್ ಮುಗಿಯುವ ವರೆಗೂ ಅಂಗಡಿ ತೆರೆಯಲು ಅನುಮತಿ ನೀಡುವುದಿಲ್ಲ‌ ಎಂದು ತಿಳಿಸಿದ್ದಾರೆ.