ವಾರ್ಡ್ ಕಡೆ ವೈದ್ಯರ ನಡೆ…

15

ದೊಡ್ಡಬಳ್ಳಾಪುರ:ಇತ್ತೀಚೆಗೆ ಜಿಲ್ಲಾಡಳಿತ ಆಡಳಿತದ ವತಿಯಿಂದ ಪ್ರಾರಂಭಿಸಿದ್ದ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ತಾಲ್ಲೂಕು ಆಡಳಿತದ ವತಿಯಿಂದ ವಾರ್ಡ್ ಕಡೆ ವೈದ್ಯರ ನಡೆ ಎಂಬ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಟೊ ಗಳಿಗೆ ಚಾಲನೆ‌ನೀಡಿ ಮಾತನಾಡಿದ ಅವರು ನಗರದ 31 ವಾರ್ಡಿಗಳಲ್ಲಿ ಹೋಂ ಐಸೋ ಲೇಷನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ಆರೋಗ್ಯ ಸೌಲಭ್ಯ ಗಳನ್ನು ಒದಗಿಸಲು ಆಟೋಗಳ ಮೂಲಕ ವೈದ್ಯಕೀಯ ಸಿಬ್ಬಂದಿಯೇ ಮನೆಮನೆಗೆ ಭೇಟಿ ನೀಡಿ, ಅವರಿಗೆ ಅವಶ್ಯಕತೆಗೆ ತಕ್ಕಂತೆ ಚಿಕಿತ್ಸೆ ಮತ್ತು ಔಷದೋಪ ಚಾರಗಳನ್ನು ನೀಡಲಿದ್ದಾರೆ ಎಂದರು. ಪ್ರತಿಯೊಂದು ಆಟೊದಲ್ಲಿ ಒಬ್ಬರು ನರ್ಸ್ ಮತ್ತು ಒಬ್ಬರು ಆಶಾ ಕಾರ್ಯಕರ್ತೆ ಮತ್ತು ಕೊರೋನಾ ರೋಗಿಗಳಿಗೆ ಬೇಕಾಗ ಬಹುದಾದ ಔಷದಿಗಳನ್ನು ಕೊಂಡೊಯ್ದು,ರೋಗಿಯ ಗುಣ ಲಕ್ಷಣಗಳನ್ನು ಸಂಬಂಧ ಪಟ್ಟ ವೈದ್ಯರಿಗೆ ತಿಳಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅರುಳ್ ಕುಮಾರ್,ತಹಶಿಲ್ದಾರ್ ಟಿಎಸ್. ಶಿವರಾಜ್,ಟಿಹೆಚ್ಒ.ಪರಮೇಶ್ವರ್, ನಗರ ಸಭಾ ಪೌರಾಯುಕ್ತ ರಮೇಶ್ ಸುಣಗಾರ್, ನಗರ ಠಾಣೆ ಎಸ್ಐ.ಬಿಕೆ.ಪಾಟೀಲ್ ಹಾಜರಿದ್ದರು.