ಲಾರಿ ಕಳ್ಳನನ್ನು‌ ಪೊಲೀಸರಿಗೆ ಹಿಡಿದುಕೊಟ್ಟ ಸ್ಥಳೀಯರು.

5

ಚಿಕ್ಕಬಳ್ಳಾಪುರ/ಚಿಂತಾಮಣಿ :ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನು ಕಳ್ಳತನ ಮಾಡಿಕೊಂಡು ಹೊಗುತ್ತಿದ್ದವನನ್ನು ಹಿಂಬಾಲಿಸಿ ತಡೆದು ಕಳ್ಳ ನನ್ನು ಪೊಲೀಸ್ ವಶಕ್ಕೆ ನೀಡಿರುವ ಘಟನೆ ತಿಮ್ಮಸಂದ್ರದಲ್ಲಿ ನಡೆದಿದೆ. ತಿಮ್ಮಸಂದ್ರದ ಮಂಜುನಾಥ್ ಎಂಬುವವರಿಗೆ ಸೇರಿದ ಲಾರಿಯನ್ನು ಮನೆ ಮುಂದೆ ನಿಲ್ಲಿಸಿದ್ದು ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಕಳ್ಳನ್ನು ಲಾರಿಯವೈರ್ ಗಳನ್ನು ತುಂಡರಿಸಿ ಲಾರಿಯನ್ನು ಚಲಾಯಿಸಿಕೊಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಸ್ಥಳೀಯರು ಹಿಂಬಾಲಿಸಿಕೊಂಡು ಹೋಗಿ ಲಾರಿ ಯನ್ನು ಅಡ್ಡಗಟ್ಟಿ ತಡೆದಿದ್ದಾರೆ.ನಂತರ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಚೊರನನ್ನು ಸ್ಥಳೀಯರು ಹಿಗ್ಗಾಮಗ್ಗ ಥಳಿಸಿ ಆತನನ್ನು ಪೋಲಿಸ್ ವಶಕ್ಕೆ ನೀಡಿದ್ದಾರೆ.