ಧರ್ಮ ಗುರುಗಳಿಗೆ ದಿನಸಿಕಿಟ್ ನೀಡಿದ ಶಾಸಕರು

35

ಬೆಂಗಳೂರು ನಗರ/ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಮತ್ತು ಮಾಜಿ ಸಚಿವರಾದ ಬಿ.ಜೆಡ್. ಜಮೀರ್ ಅಹಮದ್ ಖಾನ್. ರವರ ನೇತೃತ್ವದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ದೇವಸ್ಥಾನ,ಮಸೀದಿ ಚರ್ಚುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 350 ಜನ ಧರ್ಮಗುರುಗಳಿಗೆ ದಿನಸಿಕಿಟ್ ಮತ್ತು ಪ್ರತಿ ಧರ್ಮಗುರುಗಳಿಗೆ 5000 ರೂಗಳ ಸಹಾಯಧನ ವಿತರಣಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಚಾಮರಾಜಪೇಟೆ ವಾರ್ಡ್ ಮಾಜಿ ಕಾರ್ಪೊರೇಟರ್ ಕೋಗಿಲೆ ಚಂದ್ರಶೇಖರ್. ಆಜಾದ್ ನಗರ ಸಮಾಜ ಸೇವಕರು ಬಿಸಿ ರಮೇಶ್,ಕೆಆರ್ ಮಾರ್ಕೆಟ್ ಕಾರ್ಪೊರೇಟರ್. ಜೆಜೆ ಆರ್ ನಗರ ಸೀನಿಯರ್ ನಾಯಕರು ಸಮಾಜ ಸೇವಕರು ಬಿಕೆ ಅಲ್ತಾಫ್ ಖಾನ್. ರಾಯಪುರ ಕಾಂಗ್ರೆಸ್ ಪಾರ್ಟಿ ಯುವ ನಾಯಕರು ಸಿ.ಆರ್.ರವಿಪ್ರಸಾದ್.ಹುಮನ್ ರೈಟ್ಸ್ ಉಪಾಧ್ಯಕ್ಷ ಎನ್ ಶಾಂತಪ್ಪ.ರಾಯಪುರಂ ವಾರ್ಡ್ ಸಮಾಜಸೇವಕರು ಎಂಎನ್ ಗೋಪಾಲ್ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.