ಪಂಚಾಯ್ತಿ ಸದಸ್ಯ ನಿಂದ ಮಾರಣಾಂತಿಕ ಹಲ್ಲೆ..!?

16

ಗ್ರಾಮ ಪಂಚಾಯಿತಿ ಸದಸ್ಯರಿಂದ ಏಕಾಏಕಿ ಹಲ್ಲೆ.

ಚಿಕ್ಕಬಳ್ಳಾಪುರ / ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಕಟ್ಟಮಾಚನಹಳ್ಳಿಯ ಮುನಗನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆಎಸ್ ಪ್ರಕಾಶ್ ಅವರು ಕೆ.ಆರ್ ಅರ್ಜುನ್ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕೆ.ಆರ್ ಅರ್ಜುನ್ ಮತ್ತು ಅವರ ಅಣ್ಣ-ತಮ್ಮ ಕೆರೆಯ ಬಳಿ ಹೋಗಿ ಬರುತ್ತಿದ್ದ ವೇಳೆ ಅಲ್ಲಿ ಯಾರೋ ಆಸಾಮಿಗಳು ಹೊಡೆದಾಡುವುದನ್ನು ಕಂಡು ಅವರನ್ನು ಬಿಡಿಸಲು ಹೋಗಿದಕ್ಕೆ ಅವರ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಅವರು ಅವರ ಮೇಲೆ ಏಕಾಏಕಿ ರಾಡಿನಿಂದ ಹೊಡೆದು ಇವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ಎಂದು ತಿಳಿಸಿದರು.