ರಸ್ತೆಯನ್ನೇ ಕಬಳಿಸಲು ಮುಂದಾದ ಮೂರ್ಖರು.!

21

ಅಕ್ರಮವಾಗಿ ರಸ್ತೆಯನ್ನು ಕಬಳಿಸಿರುವ ವಿರುದ್ಧ ಕ್ರಮ ಜರುಗಿಸಲು ಆಗ್ರಹ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆಯ ವ್ಯವಸ್ಥೆ ಮಾಡಿಕೊಡಲು ಗ್ರಾಮಸ್ಥರ ಮನವಿ.

ಚಿಂತಾಮಣಿ :ತಾಲ್ಲೂಕಿನ ಕೈವಾರ ಹೋಬಳಿ ಮಲ್ಕಾಪುರ ಗ್ರಾಮದ ಸರ್ವೆ ನಂಬರ್ 43 ರ ಪಕ್ಕದಲ್ಲೇ ಇರುವ ರಸ್ತೆಯನ್ನು ಅಕ್ರಮವಾಗಿ ಗ್ರಾಮದ ವೆಂಕಟಕೃಷ್ಣಪ್ಪ ಎಂಬವರು ಕಬಳಿಸಿ ಮುಳ್ಳಿನ ತಂತಿ ಹಾಕಿಕೊಂಡಿದ್ದಾರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆ ಮುಳ್ಳಿನ ತಂತಿ ಗಳನ್ನು ತೆರವುಗೊಳಿಸಿ ವಾಹನಗಳು ಹೋಗಿ ಬರಲು ರಸ್ತೆಯ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮಲ್ಕಾಪುರದಿಂದ ಅರಣ್ಯಕ್ಕೆ ಹೋಗುವ ದಾರಿಯನ್ನು ಕಬಳಿಸಿಕೊಂಡು ಆ ದಾರಿಯಲ್ಲಿ ಓಡಾಡುವವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮುಳ್ಳಿನ ತಂತಿಗಳನ್ನು ತೆರವುಗೊಳಿಸಿ ದಾರಿ‌ ಯನ್ನು ಓಡಾಡಲು ಅನುವು ಮಾಡಿಕೊಡ ಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಹಲವಾರು ವರ್ಷಗಳ ಹಿಂದಿನಿಂದಲೂ ವೆಂಕಟ ಕೃಷ್ಣಪ್ಪನ ಮನೆ ಸಮೀಪ ಓಡಾಡಲು ದಾರಿ ಇದ್ದು ಆ ದಾರಿಯನ್ನು ಕಬಳಿಸಿದ್ದಾರೆ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಮಾಧ್ಯಮದವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.