ದಾಸೋಹ ವೀಕ್ಷಿಸಿದ ಕೆಪಿಸಿಸಿ ಕಾರ್ಯದರ್ಶಿ.

98

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಕೋವಿಡ್ ಹಿನ್ನೆಲೆಯಲ್ಲಿ ಹತ್ತಾರು ದಿನಗಳಿಂದ ದಿನ ನಿತ್ಯ ಸಾವಿರಾರು ಜನ ಹಸಿದ ರಿಗೆ ಅನ್ನ ನೀಡುತ್ತಿರುವುದನ್ನುಕೆಪಿಸಿಸಿ ರಾಜ್ಯ ಕಾರ್ಯ ದರ್ಶಿ ಕೃಷ್ಣಭೈರೇಗೌಡ ಅಭಿನಂದಿಸಿದರು. ನಗರದಲ್ಲಿ‌ ಕೋವಿಡ್ ಲಾಕ್ ಡೌನ್ ಹಿನ್ನಲೆ ಯಲ್ಲಿಹತ್ತಾರು ದಿನಗಳಿಂದ ನಡೆಯುತ್ತಿರುವ “ಅನ್ನದಾಸೋಹ” ಕಾರ್ಯಕ್ರಮದ ವೀಕ್ಷಣೆ ಗಾಗಿ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಮಾತನಾಡುತ್ತಾ ರಾಜ್ಯದ ಜನತೆಯ ಹಿತ ಕಾಪಾಡ ಬೇಕಾದ ಆಡಳಿತ ಪಕ್ಷ ಮತ್ತು ಸರ್ಕಾರ ಜವಾಬ್ದಾರಿ ಮರೆತು ನಾಯಕತ್ವಕ್ಕಾಗಿ ಕಿತ್ತಾಡುತ್ತಿರುವುದು ಖಂಡನೀಯ.ಕಾಂಗ್ರೆಸ್ ಪಕ್ಷದ ವರಿಷ್ಠರು ನೀಡಿದ ಆದೇಶದಂತೆ ಹಸಿದವರ ಸೇವೆಗೆ ನಿಂತ ಶಾಸಕ ಟಿ.ವೆಂಕಟರಮಣಯ್ಯ ನಿಷ್ಟೆ ಯಿಂದ ಬಡಬಗ್ಗರ ಹಸಿವು ನೀಗಿಸಲು ಸಕ್ರಿಯ‌ ಅನ್ನದಾಸೋಹ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಎಂದರು.ನಗರ ವ್ಯಾಪ್ತಿಯಲ್ಲೇ ಸುಮಾರು ಇಪ್ಪತ್ತೆಂಟು ಕೇಂದ್ರಗಳಲ್ಲಿ ದಿನನಿತ್ಯ ಹನ್ನರಡು ಸಾವಿರ ಜನಕ್ಕೆ ಬೆಳಗ್ಗೆ ತಿಂಡಿ ಮದ್ಯಾಹ್ನ ಊಟ ನೀಡಿ ಕ್ಷೇತ್ರದ ಶಾಸಕರ ಜವಾಬ್ದಾರಿ ನಿಭಾಯಿಸುವ ಕಾರ್ಯ ಸುಲಭಸಾಧ್ಯವಲ್ಲ ಎಂದರು. ಮಾದ್ಯಮದೊಂದಿಗೆ ಮಾತನಾಡಿದ ಅವರು ಕೊರೋನಾ ಸಂಕಷ್ಟದ ನಡುವೆಯೂ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪೆಟ್ರೋಲ್, ಡೀಸಲ್,ಗ್ಯಾಸ್ ಮತ್ತು ವಿದ್ಯುತ್ ಬೆಲೆ ಏರಿಸಿ ಜನಸಾಮಾನ್ಯರ ಸ್ಥಿತಿ ಗಾಯದ ಮೇಲೆ ಬರೆ ಎಳೆಯುತಿದ್ದಾರೆ ಎಂದು ಆರೋಪಿಸಿದರು. ಸಂಕ್ಷಷ್ಟಲ್ಲಿರು ಜನರ ಪರವಾಗಿ ಕೋವಿಡ್ ಲಾಕ್ಡೌನ್ ಮುಗಿಯುತಿದ್ದಂತೆ ಬೆಲೆ ಏರಿಕೆ ವಿರುದ್ದ ಪ್ರತಿಭಟನೆಗೆ ಸಿದ್ದರಾಗುತಿದ್ದೇವೆ ಎಂದು ಮಾಹಿತಿ ನೀಡಿದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡುತ್ತಾ ನಗರದ ಸಾಕಷ್ಟು ಜನ ಕೊಡುಗೈ ದಾನಿಗಳಿಂದ ಶೇಕರಿಸಿದ ದಿನಸಿಯಿಂದ ಹಸಿದವರ ಹೊಟ್ಟೆ ತುಂಬಿಸುತ್ತಿರುವ ಕಾರ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನನ್ನೊಂದಿಗೆ ಕೈ ಜೋಡಿಸುತ್ತಿ ರುವುದು ದಾಸೋಹದ ಕಾರ್ಯ ಸುಗ ವಾಗಿ ಸಾಗಲು ಕಾರಣವಾಗಿದೆ ಎಂದರು.