ಕೈವಾರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ಗ್ರಾಮಸ್ಥರ ಆತಂಕ

13

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಕೈವಾರದ ಬೆಟ್ಟ ದಲ್ಲಿ ಶನಿವಾರ ಸಂಜೆ 05 ಗಂಟೆ ಸಮಯದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು ಕೈವಾರ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತ ಲಿನ ಹಳ್ಳಿಯ ಜನರು ಭಯಭೀತರಾಗಿದ್ದಾರೆ . ಪದೇಪದೆ ತಾಲ್ಲೂಕಿನ ಕೈವಾರದ ಬೆಟ್ಟದಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಯ ಅಧಿಕಾರಿಗಳು ಚಿರತೆಗಳನ್ನು ಹಿಡಿಯುವು ದರಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೆ ಶನಿವಾರ ಸಂಜೆ 05 ಗಂಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಜನರು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿದು ಜನರ ಭಯವನ್ನು ದೂರಗೊಳಿಸಬೇಕೆಂದು ಗ್ರಾಮಸ್ಥರು ಹೇಳಿದ್ದಾರೆ.