ದಿನಸಿ ಕಿಟ್ ವಿತರಣೆ‌ಮಾಡಿದ ಸಮಾಜ ಸೇವಕ ರವಿ.

10

ಸಮಾಜ ಸೇವಕ ಗೋಪಿ ರವರಿಂದ ಪೆದ್ದೂರು ಪಂಚಾಯ್ತಿಯಲ್ಲಿ ದಿನಸಿ ಕಿಟ್ ವಿತರಣೆ

ಚಿಕ್ಕಬಳ್ಳಾಪುರ/ ಚಿಂತಾಮಣಿ :ಕೆ ಎಂ ಕೆ ಟ್ರಸ್ಟ್ ನ ಅಧ್ಯಕ್ಷ ದೇವನಹಳ್ಳಿ ವೇಣುಗೋಪಾಲ್ ಅಲಿಯಾಸ್ ಗೋಪಿ ರವರು ತಮ್ಮ ಸಮಾಜ ಸೇವೆಯನ್ನು ಮುಂದುವರಿಸಿದ್ದು ಇಂದು ಚಿಂತಾಮಣಿ ತಾಲ್ಲೂಕಿನ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು ಸೇರಿದಂತೆ ಆಶಾ ಕಾರ್ಯಕರ್ತರು ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಗಳಿಗೆ ದಿನಸಿ ಕಿಟ್ ಅನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಪೆದ್ದೂರು ನಾಗರಾಜರೆಡ್ಡಿ ಮಾತನಾಡಿ ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ ಕೆಎಂಕೆ ಟ್ರಸ್ಟ್ ನ ಅಧ್ಯಕ್ಷ ವೇಣುಗೋಪಾಲ್ ರವರ ಜನಪರ ಕಾರ್ಯಕ್ರಮ ಗಳಿಗೆ ಮೆಚ್ಚಿ ಅವರಿಗೆ ನಾನು ಸಹಕಾರ ನೀಡುತ್ತಿದ್ದೇನೆ ಹೊರತು ನಾನು ಪಕ್ಷ ವನ್ನು ಬಿಟ್ಟಿಲ್ಲ ನನ್ನ ಬಗ್ಗೆ ಕೆಲವರು ಊಹಾ ಪೋಹಗಳನ್ನು ಎಬ್ಬಿಸಿದ್ದಾರೆ ಕ್ಷೇತ್ರದ ಜನರು ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದರು. ನಂತರ ವಾಣಿ ಕೃಷ್ಣಾರೆಡ್ಡಿ ರವರು ಮಾತನಾಡಿ ನಮ್ಮ ತಂದೆಯಾದ ದಿವಂಗತ ಕೆಎಂ ಕೃಷ್ಣಾರೆಡ್ಡಿ ರವರನ್ನು ಕ್ಷೇತ್ರದ ಜನತೆ ಯಾವ ರೀತಿ ಸಹಕಾರ ನೀಡುತ್ತಿದ್ದರು ಅದೇ ರೀತಿ ದೇವನಳ್ಳಿ ಗೋಪಿ ರವರಿಗೂ ಸಹಕಾರ ನೀಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಕೆಎಂ.ರಾಜಶೇಖರ್ ರೆಡ್ಡಿ. ಸಿ ಆರ್ ಶ್ರೀನಾಥ್ ‘ರಾಮಕೃಷ್ಣ ರೆಡ್ಡಿ, ಕೃಷ್ಣಾ ರೆಡ್ಡಿ ದಿಗುವಪಲ್ಲಿ ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ಸುಧಾಕರ್,ವೆಂಕಟರಮಣಪ್ಪ,ಸಿದ್ಧಾ ರೆಡ್ಡಿ,ಅಲ್ಲಾ ಭಕಾಷ್,ಕೆಎಂ.ಅಂಜಿ, ವೆಂಕಟ ರವಣಪ್ಪ,ಲಾಯರ್ ರವಿ, ಸಂತೇಕಲ್ಲಹಳ್ಳಿ ಮಹೇಶ್, ಕುಮಾರ ಸೇರಿದಂತೆ ಹಲವಾರು ಮಂದಿ ಇದ್ದರು