ಜನಜಾಗೃತಿಗೆ ಮುಂದಾದ ಡಿವೈಎಸ್ಪಿ ಟಿ.ರಂಗಪ್ಪ

23

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ರಾಜ್ಯದಲ್ಲೆ ಅತಿಹೆಚ್ಚು ಕೊರೋನಾ ಕೇಸ್ ಇದ್ದು ಅದರಲ್ಲೂ ನಮ್ಮ ನಗರ ಕೆಂಪುವಲಯ ಎಂದು ಘೋಷಣೆ ಯಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆದೇಶ ದ ಮೇರೆಗೆ ಎಚ್ಚೆತ್ತ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನಗರಾದ್ಯಂತ ಟಫ್ ರೂಲ್ಸ್ ಫಾಲೋ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನವನ್ನು ಪರಿಶೀಲನೆ ಮಾಡುತಿದ್ದು,ಪರಿಶೀಲನೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿ ‌ಅನವಶ್ಯಕ ವಾಗಿ ರಸ್ತೆಗೆ ಬಂದ ವಾಹನಗಳನ್ನು ಪತ್ತೆಹಚ್ಚಿ ದಂಡ ವಿಧಿಸುವ ಕಾರ್ಯ ದಲ್ಲಿ ತೊಡಗಿದ್ದಾರೆ. ಕಂದಾಯ ಇಲಾಖೆ,ರಕ್ಷಣಾ ಇಲಾಖೆ ಮತ್ತು ನಗರಾಸಭಾ ಅಧಿಕಾರಿ ಸಿಬ್ಬಂದಿವರ್ಗ‌ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನ ಇಲ್ಲ ದಂತಾಗಿ ದೊಡ್ಡಬಳ್ಳಾಪುರದ ಉಪನೊಂದಣಿ ಅಧಿಕಾರಿ ಕಾರ್ಯಾಲಯದಲ್ಲಿ ನೋಂದಣಿ ಗಾಗಿ ಬಂದ ಅನೇಕರು ಸಾಮಾಜಿಕ ಅಂತರ ವಿಲ್ಲದೆ ನಿಯಮಗಳನ್ನು ಮರೆತು ಗುಂಪು ಗುಂಪಾಗಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸ್ ಅಧಿಕಾರಿಗಳೇ ಸ್ಥಳಕ್ಕೆ ಬರುವಂತಾಯಿತು. ವಿಷಯತಿಳಿದು ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ತಹಶಿಲ್ದಾರ್‌ ಟಿಎಸ್.ಶಿವರಾಜ್ ಮತ್ತು ನೊಂದಣಾಧಿಕಾರಿ ಸತೀಶ್ ಪ್ರತಿಯೊಬ್ಬರೂ ಕಚೇರಿ ಒಳಗೆ ಬರುವ ಮುನ್ನ ಸ್ವಾಬ್ ಟೆಸ್ಟ್ ಕಡ್ಡಾಯ ಮಾಡಿಸುವಂತೆ ಷರತ್ತು‌ ವಿಧಿಸಿದ್ದಾರೆ. ಸ್ವಾಬ್ ಟೆಸ್ಟ್ ಕಡ್ಡಾಯವಾದ ನಂತರ ನೊಂದಣಿ ಮಾಡಿಸಲು ಟೋಕನ್ ಪದ್ದತಿ ಮುಖಾಂತರ ಹೋಗಿ ನೊಂದಣಿ ಮಾಡಿಸಲು ಡಿವೈಎಸ್ಪಿ ಟಿ.ರಂಗಪ್ಪ ಸೂಚಿಸಿದ್ದಾರೆ.