ಗುರೂಜಿ ಹಸ್ತಾಂತರಿಸಿದ ಬಾಡಿಗೆ ಆ್ಯಂಬುಲೆನ್ಸ್ ಗಳ ವಿಚಾರ…!?

16

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಇತ್ತೀಚೆಗೆ ತಾಲೂಕಿನ‌ ಘಾಟಿ ಕ್ಷೇತ್ರದಲ್ಲಿ ಉಪ ಮುಖ್ಯ ಮಂತ್ರಿ ಡಾ.ಅಶ್ವತ್ ನಾರಾಯಣ್ ರವರ ಮೂಲಕ ಸರ್ಕಾರಕ್ಕೆ ಎರಡು ಬಾಡಿಗೆ ಆ್ಯಂಬುಲೆನ್ಸ್ ಗಳನ್ನು ಹಸ್ತಾಂತರ ಮಾಡಿ ವಿವಾದಕ್ಕೆ ಕಾರಣ ವಾಗಿದ್ದ ವಿನಯ್ ಗುರೂಜಿ ಮಾದ್ಯಮ ದವರಿಗೆ ಆರೋಪದ ಬಗ್ಗೆ ಸ್ಪಷ್ಠೀ ಕರಣ ನೀಡಲಾರದೆ ತಬ್ಬಿಬ್ಬಾದ ಘಟನೆ ನಡೆದಿದೆ. ಇಲ್ಲಿನ ರಾಜ್ ಕುಮಾರ್ ಪುರಭವನದಲ್ಲಿ ಮಹಾತ್ಮ ಗಾಂಧೀ ಸೇವಾ ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆರಿಗೆ ಮೆಡಿಕಲ್‌ ಕಿಟ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿನಯ್ ಗುರೂಜಿ ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ “ಬಾಡಿಗೆ ಆ್ಯಂಬುಲೆನ್ಸ್ ಹಸ್ತಾಂತರಕ್ಕೆ ಇಷ್ಟೊಂದು ಬಿಲ್ಡಪ್ ಏಕೆ” ಎಂಬ ವಕ್ಕಣೆ ಬಗ್ಗೆ ಮಾತನಾಡುತ್ತಾ ಕೊರೋನಾ ಸೋಂಕಿತರ ನೆರವಿಗಾಗಿ ನಾವು ಬಾಡಿಗೆ ಆ್ಯಂಬುಲೆನ್ಸ್ ಗಳನ್ನ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ಮೂಲಕ ಹಸ್ತಾಂತರ ಮಾಡಿದ್ದೇವೆ ಅದನ್ನು ಸ್ವಂತದ್ದು ಎಂದು ನಾವು ಎಲ್ಲೂ ಪ್ರಚಾರ ಮಾಡಿಲ್ಲ ಎಂದಿದ್ದಾರೆ.ನೀವು ನೀಡಿದ ಆ್ಯಂಬುಲೆನ್ಸ್ ಗಳು ನಿಮ್ಮದಲ್ಲದಿದ್ದಾಗ ನೀವು ಇನ್ನೊಬ್ಬರಿಗೆ ಹಸ್ತಾಂತರ ಮಾಡುವುದು ಕಾನೂನು ರಿತ್ಯಾ ಎಷ್ಟು ಸರಿ ಎಂದು ಪ್ರಶ್ನಿಸಿ ದಾಗ ಉತ್ತರಿಸಲಾರದೆ ತಬ್ಬಿಬ್ಬಾಗಿದ್ದಾರೆ. ಕೂಡಲೇ ಅಲ್ಲಿದ್ದ ಟ್ರಷ್ಟಿನ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ನಾವು ಆ್ಯಂಬುಲೆನ್ಸ್ ಗಳನ್ನು ಅಧಿಕೃತವಾಗಿ ಯಾವುದೇ ಅಧಿಕಾರಿವರ್ಗಕ್ಕೆ ಹಸ್ತಾಂತರ ಮಾಡಿಲ್ಲ ಆ್ಯಂಬುಲೆನ್ಸ್ ಬಾಡಿಗೆಗೆ ಪಡೆದಿರುವುದು ನಿಜ, ಅವುಗಳನ್ನು ಗುರುಗಳ ಅನುಯಾಯಿಗಳಾದ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಮತ್ತು ಅರವಿಂದ ಲಿಂಬಾವಲಿರವರ ಮೂಲಕ ಕೊರೋನಾ ಸೋಂಕು ಕೊನೆಗೊಳ್ಳುವ ತನಕ ಸಾರ್ವಜನಿಕರ ಸೇವೆಗೆ ಮೀಸಲಿರಿಸಿದ್ದೇವೆ ಎಂದರು. ಒಂದುವೇಳೆ ಆ್ಯಂಬುಲೆನ್ಸ್ ಮಾಲಿಕರಿಗೆ ನಾವು ಬಾಡಿಗೆ ಸಲ್ಲಿಸದಿದ್ದಲ್ಲಿ ನಮ್ಮನ್ನು ಪ್ರಶ್ನಿಸಲಿ ಎಂದಿದ್ದಾರೆ. ನಮ್ಮಗುರುಗಳು ಅವದೂತ ವಿನಯ್ ಗುರೂಜಿ ಮಾರ್ಗದರ್ಶನ ದಲ್ಲಿ ಕೊರೋನಾ ಮೊದಲನೆ ಅಲೆ ಮತ್ತುಎರಡನೇ ಅಲೆಯಲ್ಲಿ ನಮ್ಮ ಟ್ರಸ್ಟಿನ ಮೂಲಕ ಸಾವಿರಾರು ಜನರಿಗೆ ದಿನಸಿಕಿಟ್ ಮತ್ತು ಔಷದಿ ಕಿಟ್ನೀಡಿ ಸೇವೆ ಸಲ್ಲಿಸುತಿದ್ದೇವೆ. ನಮ್ಮಮೇಲೆ‌ ಆರೋಪ ಮಾಡುವವರು ಕನಿಷ್ಟ ಒಂದೈದು ಜನಕ್ಕೆ ದಿನಸಿ ಕಿಟ್ ಅಥವಾ ಔಷದಿ ಕಿಟ್ ನೀಡುವಂತಾಗಲಿ ಎಂದು ಸವಾಲೆಸದ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿ,ತಮ್ಮಗುರು ಮತ್ತು ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ವಿನಯ್ ಗುರೂಜಿಯವರನ್ನು ಸಮರ್ಥಿಸಿ ಕೊಂಡಿದ್ದಾರೆ. ಗುರುಗಳ ಮತ್ತು ಟ್ರಸ್ಟಿನ ಹೇಳಿಕೆಯ ಪ್ರಕಾರ ಯಾವುದೇ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ತಲಪಿಲ್ಲ ತರಕಾರಿಯೂ ತಲುಪಿಲ್ಲ, ತಾಲೂಕು ಆರೋಗ್ಯ ಆಡಳಿತ ಹೇಳಿದಾಗ ಸಬೆ ಗಳಿಗೆ ನಾವು ಬರಬೇಕು ಟ್ರಸ್ಟಿನವರು ಅವರ ಪ್ರಚಾರಾಕ್ಕೆ ನಮ್ಮನ್ನು ಬಳಸಿ ಕೊಂಡು ಬರೀ ಬಿಲ್ಡಪ್ ಕೊಟ್ಟು ಹೋಗ್ತಾರೆ ಬಿಟ್ರೆ, ಅವರಿಂದ ನಮಗೇನು ಮೂರುಕಾಸಿನ ಪ್ರಯೋಜನ ಆಗಿಲ್ಲ ಎಂದು‌ ತಮ್ಮಅಳಲು ತೋಡಿ ಕೊಳ್ಳುತ್ತಾರೆ ಹೆಸರನ್ನು ಹೇಳ‌ಬಯಸದ ಆಶಾ ಕಾರ್ಯಕರ್ತೆಯರು .